ಕಾರ್ಲೊಸ್ ಅಲ್ಕರಾಜ್
-ರಾಯಿಟರ್ಸ್ ಚಿತ್ರ
ಪ್ಯಾರಿಸ್: ಕೆನಡಾದ ಫೆಲಿಕ್ಸ್ ಅಗರ್ ಅಲಿಯಾಸಿಮ್ ಅವರನ್ನು ಸುಲಭವಾಗಿ ಸೋಲಿಸುವ ಮೂಲಕ ಕಾರ್ಲೊಸ್ ಅಲ್ಕರಾಜ್ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಟೆನಿಸ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಯುವ ಅಟಗಾರ ಎನ್ನುವ ಹೆಗ್ಗಳಿಗೆ ಪಾತ್ರರಾದರು.
21 ವರ್ಷದ ಅಲ್ಕರಾಜ್, 6–1, 6–1 ಅಂತರದಲ್ಲಿ ಗೆಲುವು ಸಾಧಿಸಿದರು. ಕೇವಲ 75 ನಿಮಿಷಗಳಲ್ಲೇ ಗೆಲುವು ಸಾಧಿಸಿದರು.
‘ಚಿನ್ನದ ಪದಕ ಗೆಲ್ಲಬೇಕು ಎನ್ನುವ ಗುರಿ ವರ್ಷಾರಂಭದಿಂದಲೂ ಇತ್ತು. ಇದೀಗ ಅದಕ್ಕೆ ಒಂದೇ ಮೆಟ್ಟಿಲು ಬಾಕಿ ಇದೆ’ ಎಂದು ಗೆಲುವಿನ ಬಳಿಕ ಅಲ್ಕರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.