ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿ ಪದಕ ಜಯಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 18:10 IST
Last Updated 8 ಆಗಸ್ಟ್ 2024, 18:10 IST
   

ಪ್ಯಾರಿಸ್: ಭಾರತ ಪುರುಷರ ಹಾಕಿ ತಂಡವು ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತು.  ಗುರುವಾರ ನಡೆದ ಪ್ಲೇ ಆಫ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ಜಯಿಸಿತು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಭಾರತ ತಂಡವು ಕಂಚು ಗೆದ್ದಿತ್ತು. 

ಭಾರತ ತಂಡವು ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು ಸೋತಿತ್ತು. ಅದರಿಂದಾಗಿ ಕಂಚಿನ ಪದಕ ಸುತ್ತಿನ ಪ್ಲೇ ಆಫ್‌ನಲ್ಲಿ ಆಡಿತು. ಭಾರತದ ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್ ನಿವೃತ್ತಿ ಘೋಷಿಸಿದರು. ಈ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಪದಕ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ನಾಲ್ಕನೇ ಪದಕ ಇದಾಗಿದೆ.

ಪಂದ್ಯ ಫಲಿತಾಂಶ

ಭಾರತ;2

ADVERTISEMENT

ಸ್ಪೇನ್; 1

ಗೋಲು ಗಳಿಸಿದವರು

ಭಾರತ

ಹರ್ಮನ್‌ಪ್ರೀತ್ ಸಿಂಗ್ 

(30ನಿ, 33ನಿ)

ಸ್ಪೇನ್‌

ಮಾರ್ಕ್ ಮಿರಾಲೆಸ್

(18ನಿ)

ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಪದಕಗಳು

ಚಿನ್ನ;8

ಬೆಳ್ಳಿ;1

ಕಂಚು;4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.