'ಪ್ರಣಯ ನಗರಿ' ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್‌ಗೆ ರಂಗುರಂಗಿನ ಚಾಲನೆ ದೊರೆಯಿತು.
(ರಾಯಿಟರ್ಸ್ ಚಿತ್ರ)
ಪ್ಲೇಸ್ ಡಿ ಲಾ ಕಾಂಕಾರ್ಡ್‌ನಲ್ಲಿ ವರ್ಣರಂಜಿತ ಕೂಟವು ಉದ್ಘಾಟನೆಗೊಂಡಿತು.
ಕಾಲ್ಡ್ರನ್‌ನಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಕೂಟಕ್ಕೆ ಚಾಲನೆ ದೊರೆಯಿತು.
ಸೆಪ್ಟೆಂಬರ್ 8ರಂದು ಪ್ಯಾರಾಲಿಂಪಿಕ್ಸ್ ಕೂಟವು ಮುಕ್ತಾಯವಾಗಲಿದೆ. 11 ದಿನ ನಡೆಯುವ ಪ್ಯಾರಾಲಿಂಪಿಕ್ಸ್‌ನಲ್ಲಿ 169 ದೇಶಗಳಿಂದ 4,400ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಬಲಾಢ್ಯ ತಂಡವಾದ ಚೀನಾ, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ (2020) 96 ಚಿನ್ನದ ಪದಕ ಮತ್ತು ಬ್ರಿಟನ್ 41 ಚಿನ್ನದ ಪದಕಗಳನ್ನು ಗೆದ್ದಿದ್ದವು.
ಒಟ್ಟು 20 ಲಕ್ಷ ಟಿಕೆಟ್‌ಗಳ ಮಾರಾಟವಾಗಿವೆ. 22 ಕ್ರೀಡೆಗಳಲ್ಲಿ ಒಟ್ಟು 549 ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವು ಒಟ್ಟು 19 ಪದಕ ಜಯಿಸಿತ್ತು. ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದಿತ್ತು.
ಈ ಬಾರಿಯೂ ಭಾರತ ದಾಖಲೆ ಪದಕಗಳ ನಿರೀಕ್ಷೆಯಲ್ಲಿದೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 84 ಮಂದಿ ಪದಕದ ಕನಸಿನೊಂದಿಗೆ ಸ್ಪರ್ಧಾಕಣಕ್ಕೆ ಇಳಿದಿದ್ದಾರೆ.
ಸುಮಿತ್ ಅಂಟಿಲ್ ಮತ್ತು ಭಾಗ್ಯಶ್ರೀ ಜಾಧವ್ ಭಾರತದ ಧ್ವಜಧಾರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.