ADVERTISEMENT

ಪ್ರೊ ಕಬಡ್ಡಿ: ಪಟ್ನಾ ಪೈರೆಟ್ಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 20:05 IST
Last Updated 2 ಫೆಬ್ರುವರಿ 2022, 20:05 IST

ಬೆಂಗಳೂರು: ಸಚಿನ್ ಅಮೋಘ ಆಟದ ನೆರವಿನಿಂದ ಪಟ್ನಾ ಪೈರೆಟ್ಸ್ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯ ಲೀಗ್ ಪಂದ್ಯದಲ್ಲಿ ಜಯಿಸಿತು.

ವೈಟ್‌ಫೀಲ್ಡ್‌ನಲ್ಲಿರುವ ಶೆರಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ಪಟ್ನಾ ತಂಡವು 37–35ರಿಂದ ಯು.ಪಿ. ಯೋಧಾ ವಿರುದ್ಧ ಜಯಿಸಿತು.

ಮೊದಲಾರ್ಧ ಮುಗಿದಾಗ ಪಟ್ನಾ ತಂಡವು 20–15ರಿಂದ ಮುನ್ನಡೆ ಸಾಧಿಸಿತ್ತು. ಆದರೆ,ವಿರಾಮದ ನಂತರ ಯುಪಿ ತಂಡವು ತಿರುಗೇಟು ನೀಡಿತು. ಕಠಿಣ ಪೈಪೋಟಿಯೊಡ್ಡಿತು. ತಂಡದ ಸುರೀಂದರ್ ಗಿಲ್ (10) ಮತ್ತು ಶ್ರೀಕಾಂತ್ ಜಾಧವ್ (9) ರೇಡಿಂಗ್‌ನಲ್ಲಿ ಪಾಯಿಂಟ್ಸ್‌ ಹೆಕ್ಕಿ ತಂದರು. ತಂಡದ ಗೆಲುವಿಗೆ ಪ್ರಯತ್ನಿಸಿದರು. ಆದರೆ, ಪಟ್ನಾ ತಂಡದ ನಾಯಕ ಪ್ರಶಾಂತ್ ಕುಮಾರ್ ಅವರ ಚಾಣಾಕ್ಷ ತಂತ್ರಗಳಿಂದಾಗಿ ಯೋಧಾ ತಂಡಕ್ಕೆ ಜಯ ಒಲಿಯಲಿಲ್ಲ.

ADVERTISEMENT

ಸಚಿನ್ (12) ರೇಡಿಂಗ್‌ನಲ್ಲಿ ಮಿಂಚಿದರು. ಆಲ್‌ರೌಂಡರ್ ಮೊಹಮ್ಮದ್ರೇಜ್ ಚಿಯಾನೆ (5) ಕೂಡ ಮಿಂಚಿದರು. ಇದರಿಂದಾಗಿ ಪಟ್ನಾ ತಂಡವು ರೋಚಕ ಜಯ ಸಾಧಿಸಿತು.

ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು 36–34 ರಿಂದ ಯು ಮುಂಬಾ ಎದುರು ಜಯಭೇರಿ ಬಾರಿಸಿತು. ಪುಣೇರಿ ತಂಡದ ಅಸ್ಲಂ ಇನಾಮದಾರ್ (8), ಅಭಿನೇಶ್ ನಾದರಾಜನ್ (6) ಮತ್ತು ಮೋಹಿತ್ ಗೊಯತ್ (9) ಅವರ ಆಟದ ಬಲದಿಂದ ತಂಡವು ಗೆದ್ದಿತು. ‌

ಮುಂಬಾ ತಂಡದ ಅಭಿಷೇಕ್ ಸಿಂಗ್ (8) ಮತ್ತು ವಿ. ಅಜಿತ್ (10) ಅವರು ರೇಡಿಂಗ್‌ನಲ್ಲಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.