ಪ್ಯಾರಿಸ್: ಭಾರತದ ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾನುವಾರ ನಡೆದ ಮಹಿಳೆಯರ 10 ಮೀಟರ್ಸ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದರು. ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಪದಕ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾದರು.
221.7 ಹರಿಯಾಣದ ಮನು ಭಾಕರ್ ಗಳಿಸಿದ ಸ್ಕೋರ್
ದಕ್ಷಿಣ ಕೊರಿಯಾದವರಾದ ಜಿನ್ ಯೆ ಒಹ್ (243.2) ಹಾಗೂ ಕಿಮ್ ಯಾಜಿ (241.3) ಕ್ರಮವಾಗಿ ಚಿನ್ನ, ಬೆಳ್ಳಿ ಪದಕ ಗೆದ್ದರು.
ಹೋದ ವರ್ಷದ ವಿಶ್ವ ಶೂಟಿಂಗ್‌ನಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಚಿನ್ನ ಜಯಿಸಿದ್ದರು
ಮನು ಅವರು ಹರಿಯಾಣದ ಝಾಜರ್ ಜಿಲ್ಲೆಯ ಗೊರಿಯಾ ಗ್ರಾಮದಲ್ಲಿ ಜನಿಸಿದವರು. ಅವರಿಗೆ ಈಗ 22 ವರ್ಷ.
ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಭಾರತಕ್ಕೆ 12 ವರ್ಷಗಳ ನಂತರ ಸಂದ ಪದಕ
ಭಾರತದ ಕ್ರೀಡಾಪಟುಗಳ ದಿನದ ಪ್ರಮುಖ ಸಾಧನೆ
ಶೂಟಿಂಗ್: ಮಹಿಳೆಯರ 10 ಮೀ ಏರ್ ರೈಫಲ್ ಸ್ಪರ್ಧೆಯ ಫೈನಲ್‌ಗೆ ರಮಿತಾ ಜಿಂದಾಲ್
ಬ್ಯಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಪಿ.ವಿ. ಸಿಂಧು ಜಯಭೇರಿ
ಬಾಕ್ಸಿಂಗ್: ಮಹಿಳೆಯರ್ ಫ್ಲೈವೇಟ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ಗೆ ನಿಖತ್ ಜರೀನ್
ಟಿಟಿ: ಮಹಿಳೆಯರ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ ಶುಭಾರಂಭ
ಶೂಟಿಂಗ್: ಪುರುಷರ 10 ಮೀ ಏರ್ ರೈಫಲ್ ಸ್ಪರ್ಧೆ ಫೈನಲ್‌ಗೆ ಅರ್ಜುನ್ ಬಬುತಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.