ADVERTISEMENT

ಪಿಕೆಎಲ್‌: ತಂಡದಲ್ಲೇ ಉಳಿದ 29 ಆಟಗಾರರು

ಪ್ರೊ.ಕಬಡ್ಡಿ ಲೀಗ್‌: ರೋಹಿತ್ ಕುಮಾರ್‌ ಅವರನ್ನು ಉಳಿಸಿಕೊಂಡ ಬೆಂಗಳೂರು ಬುಲ್ಸ್‌

ಪಿಟಿಐ
Published 25 ಮಾರ್ಚ್ 2019, 18:02 IST
Last Updated 25 ಮಾರ್ಚ್ 2019, 18:02 IST
ರೋಹಿತ್ ಕುಮಾರ್‌
ರೋಹಿತ್ ಕುಮಾರ್‌   

ಮುಂಬೈ: ಪ್ರೊ ಕಬಡ್ಡಿಯ ಕಳೆದ ಆವೃತ್ತಿಯಲ್ಲಿ ಆಡಿದ 29 ಆಟಗಾರರನ್ನು ಆಯಾ ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ. ‘ಎಲೀಟ್‌ ಆಟಗಾರರ ರೀಟೇನ್’ ಯೋಜನೆಯಡಿ ಇವರನ್ನು ಉಳಿಸಿಕೊಳ್ಳಲಾಗಿದೆ ಎಂದು ಆಯೋಜಕರು ಸೋಮವಾರ ತಿಳಿಸಿದ್ದಾರೆ.

ಜುಲೈ 19ರಿಂದ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ನಡೆಯಲಿದೆ ಎಂದು ತಿಳಿಸಲಾಗಿದೆ.ಕಳೆದ ಬಾರಿ 21 ಆಟಗಾರರನ್ನು ‘ರೀಟೇನ್‌’ ಮಾಡಿಕೊಳ್ಳುವ ಅವಕಾಶವಿತ್ತು. ಈ ಬಾರಿ ಈ ಸಂಖ್ಯೆ ಯನ್ನು 29ಕ್ಕೆ ಏರಿಸಲಾಗಿದೆ. ಉಳಿದ ಆಟಗಾರರ ಹರಾಜು ಪ್ರಕ್ರಿಯೆ ಏಪ್ರಿಲ್ ಎಂಟು ಮತ್ತು ಒಂಬತ್ತರಂದು ನಡೆಯಲಿದೆ.

ತಮಿಳ್ ತಲೈವಾಸ್ ತಂಡ ಸತತ ಎರಡನೇ ಬಾರಿ ಅಜಯ್‌ ಠಾಕೂರ್ ಅವರನ್ನು ಉಳಿಸಿಕೊಂಡಿದ್ದು ಮಂಜೀತ್ ಚಿಲ್ಲಾರ್ ಕೂಟ ತಂಡದಲ್ಲಿದ್ದಾರೆ. ರೋಹಿತ್ ಕುಮಾರ್‌ ಮತ್ತು ಪವನ್ ಶೆರಾವತ್‌ ಬೆಂಗಳೂರು ಬುಲ್ಸ್‌ನಲ್ಲೇ ಉಳಿದಿದ್ದಾರೆ.

ADVERTISEMENT

ಫಜಲ್ ಅತ್ರಾಚಲಿ (ಯು ಮುಂಬಾ), ಪ್ರದೀಪ್ ನರ್ವಾಲ್‌ (ಪಟ್ನಾ ಪೈರೇಟ್ಸ್‌), ದೀಪಕ್‌ ಹೂಡಾ, ಸಂದೀಪ್ ಧುಲ್‌ (ಜೈಪುರ ಪಿಂಕ್ ಪ್ಯಾಂಥರ್ಸ್‌), ಜೋಗಿಂದರ್‌ ನರ್ವಾಲ್‌ (ದಬಂಗ್ ಡೆಲ್ಲಿ), ಮಣಿಂದರ್ ಸಿಂಗ್‌ (ಬೆಂಗಾಲ್‌ ವಾರಿಯರ್ಸ್‌), ವಿಕಾಸ್ ಹೂಡಾ (ಹರಿಯಾಣ ಸ್ಟೀಲರ್ಸ್‌) ಮತ್ತು ಸಚಿನ್‌ (ಗುಜರಾತ್ ಫಾರ್ಚೂನ್‌ಜೈಂಟ್ಸ್‌) ಕೂಡ ಕಳೆದ ಬಾರಿ ಆಡಿದ ತಂಡಗಳಲ್ಲೇ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.