ADVERTISEMENT

Paris Olympics 2024: ಹಲವು ಸ್ಪರ್ಧೆಗಳಿಗೆ ಮಳೆ ಅಡಚಣೆ

ರಾಯಿಟರ್ಸ್
Published 27 ಜುಲೈ 2024, 16:12 IST
Last Updated 27 ಜುಲೈ 2024, 16:12 IST
<div class="paragraphs"><p>ರೋಲ್ಯಾಂಡ್ ಗ್ಯಾರೋಸ್‌ನ ಹೊರಗಿನ ಅಂಕಣ ಮಳೆಯಿಂದ ತೇವಗೊಂಡಿರುವುದು </p></div>

ರೋಲ್ಯಾಂಡ್ ಗ್ಯಾರೋಸ್‌ನ ಹೊರಗಿನ ಅಂಕಣ ಮಳೆಯಿಂದ ತೇವಗೊಂಡಿರುವುದು

   

–ಎಎಫ್‌ಪಿ ಚಿತ್ರ

ಪ್ಯಾರಿಸ್‌: ಶುಕ್ರವಾರ ಸಂಜೆ ಮತ್ತು ಶನಿವಾರ ಬೆಳಿಗ್ಗೆ ಸುರಿದ ಮಳೆಯ ಕಾರಣ ಒಲಿಂಪಿಕ್ಸ್‌ನಲ್ಲಿ ಹಲವು ಸ್ಪರ್ಧೆಗಳಿಗೆ ಅಡಚಣೆಯಾಗಿದೆ.

ADVERTISEMENT

ಶನಿವಾರ ನಡೆಯಬೇಕಿದ್ದ ಸ್ಕೇಟ್‌ಬೋರ್ಡಿಂಗ್‌ ವಿಭಾಗದ ಮೊದಲ ಸ್ಪರ್ಧೆಯನ್ನು ಮುಂದಕ್ಕೆ ಹಾಕಲಾಗಿದೆ. ಟೆನಿಸ್ ಸ್ಪರ್ಧೆಗಳಿಗೂ ಸಮಸ್ಯೆಯಾಗಿದ್ದು, ಸ್ಪರ್ಧೆಗಳು ವಿಳಂಬವಾಗಿವೆ.

ಉದ್ಘಾಟನೆ ಸಮಾರಂಭಕ್ಕೆ ಮೊದಲು ಸುರಿದ ಮಳೆಯಿಂದ ಆಯೋಜಕರ ಉತ್ಸಾಹ ಸ್ವಲ್ಪ ಮಟ್ಟಿಗೆ ಕುಂದಿತ್ತು. ರಾತ್ರಿ 1.30ರ (ಭಾರತೀಯ ಕಾಲಮಾನ) ನಂತರ ಮಳೆಯ ಅಬ್ಬರ ತಗ್ಗಿದರೂ, ಹಲವು ದೇಶಗಳ ಕ್ರೀಡಾಪಟುಗಳು ದೋಣಿಯಲ್ಲಿ ನಡೆದ ಮೆರವಣಿಗೆಯಿಂದ ದೂರ ಉಳಿಸಿದ್ದರು.

‘ದುರದೃಷ್ಟವಶಾತ್ ಮಳೆಯಿಂದಾಗಿ ಉದ್ಘಾಟನೆ ವೇಳೆ ಹಾಜರಾಗಲು ಸಾಧ್ಯವಾಗಲಿಲ್ಲ. ಆ ವೇಳೆ ಮೊಬೈಲ್‌ನಲ್ಲಿ ವೀಕ್ಷಿಸುತ್ತಾ, ವಿಶ್ರಾಂತಿ ಪಡೆದೆ’ ಎಂದು ಚೀನಾದ ಬ್ಯಾಡ್ಮಿಂಟನ್‌ ಆಟಗಾರ್ತಿ ಹೀ ಬಿಂಗ್ಜಿಯಾವೊ ಪ್ರತಿಕ್ರಿಯಿಸಿದ್ದಾರೆ.

ಸ್ಕೇಟ್‌ಬೋರ್ಡಿಂಗ್ ಸ್ಪರ್ಧೆಯನ್ನು ಹೊರಾಂಗಣ ತಾಣ ಡೆಲಾ ಕಂಕೋರ್ಡ್‌ ಅರ್ಬನ್ ಪಾರ್ಕ್‌ನಲ್ಲಿ ನಡೆಸಲಾಗುತ್ತದೆ. ಅಂಗಣ ತೇವವಾಗಿದ್ದ ಕಾರಣ ಪುರುಷರ ವಿಭಾಗದ ಸ್ಪರ್ಧೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಕ್ರೀಡೆಯ ಆಡಳಿತ ನಿರ್ವಹಿಸುವ ‘ವಿಶ್ವ ಸ್ಕೇಟ್‌’ ತಿಳಿಸಿದೆ.

ಟೆನಿಸ್ ಸ್ಪರ್ಧೆಯ ಆರಂಭದ ದಿನವೇ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಚಾವಣಿಯ ಅಡಿಯಲ್ಲಿ ನಡೆಯುವ ಫಿಲಿಪ್ ಶಾಟಿಯೆ ಅಂಕಣ ಮತ್ತು ಸುಝೇನ್ ಲೆಂಗ್ಲೆನ್‌ ಅಂಕಣದಲ್ಲಿ ಸ್ಪರ್ಧೆಯು ಸಮಯಕ್ಕೆ ಪ್ರಾರಂಭವಾಯಿತು. ಆದರೆ, ಹೊರಾಂಗಣದಲ್ಲಿ ಸ್ಪರ್ಧೆಗಳು ವಿಳಂಬವಾದವು.

ಐಫೆಲ್ ಗೋಪುರದ ಸಮೀಪ ಶನಿವಾರ ನಡೆದ ಬೀಚ್ ವಾಲಿಬಾಲ್‌ ಸ್ಪರ್ಧೆಗೂ ಮಳೆ ಅಡಚಣೆ ಉಂಟು ಮಾಡಿತು. ಅಲ್ಲಿ ‘ಸನ್‌ಗ್ಲಾಸ್‌’ಗಳಿಗಿಂತ ಛತ್ರಿಗಳು ಮಳೆಗೆ ಸಾಕ್ಷಿಯಾಗಿದ್ದವು.

ನಿಗದಿಯಂತೆ ಟ್ರಯಥ್ಲಾನ್ ಸ್ಪರ್ಧೆಗಳು ಮಂಗಳವಾರ ನಡೆಯಬಹುದು ಎಂಬ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ. ಆದರೆ, ಭಾನುವಾರ ನಡೆಯಬೇಕಿದ್ದ ತರಬೇತಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.