
ಹೈದರಾಬಾದ್: ಬೆಂಗಳೂರು ಟಾರ್ಪಿಡೋಸ್ ತಂಡವು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಮೀಟಿಯರ್ಸ್ ತಂಡವನ್ನು ಮಣಿಸಿ ಪ್ರೈಮ್ ವಾಲಿಬಾಲ್ ಲೀಗ್‌ನ ನಾಲ್ಕನೇ ಆವೃತ್ತಿಯ ಚಾಂಪಿಯನ್ ಆಯಿತು.
ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಟಾರ್ಪಿಡೋಸ್ ತಂಡವು 15–13, 16–4, 15–13ರಿಂದ ಮೀಟಿಯರ್ಸ್ ತಂಡವನ್ನು ಸೋಲಿಸಿತು.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಎರಡೂ ತಂಡಗಳ ಆಟಗಾರರು ಫೈನಲ್‌ನಲ್ಲಿಯೂ ಪ್ರಬಲ ಪ್ರತಿರೋಧ ತೋರಿದರು. ಸೇತು ಅವರ ಸರ್ವ್‌ಗಳನ್ನು ನಿಭಾಯಿಸುವಲ್ಲಿ ಎಡವಿದ ಮೀಟಿಯರ್ಸ್ ತಂಡವು ಪಂದ್ಯವನ್ನು ಕೈಚೆಲ್ಲಿತು. ನಾಯಕ ಮ್ಯಾಟ್ ವೆಸ್ಟ್ ಅವರು ಚಾಣಾಕ್ಷತನದಿಂದ ಚೆಂಡನ್ನು ನಿಯಂತ್ರಿಸಿ, ಟಾರ್ಪಿಡೋಸ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.