ADVERTISEMENT

ಪ್ರೊ ಕಬಡ್ಡಿ | ನೂರನೇ ಪಂದ್ಯದಲ್ಲಿ ಮಿಂಚಿದ ಭರತ್: ತೆಲುಗು ಟೈಟನ್ಸ್‌ಗೆ ಜಯ

ಪಿಟಿಐ
Published 9 ಅಕ್ಟೋಬರ್ 2025, 0:47 IST
Last Updated 9 ಅಕ್ಟೋಬರ್ 2025, 0:47 IST
<div class="paragraphs"><p>ಪ್ರೊ ಕಬಡ್ಡಿ ಲೀಗ್</p></div>

ಪ್ರೊ ಕಬಡ್ಡಿ ಲೀಗ್

   

ಚೆನ್ನೈ: ಆಲ್‌ರೌಂಡರ್ ಭರತ್ (20 ಅಂಕ) ಅವರ ಅಮೋಘ ಆಟದ ನೆರವಿನಿಂದ ತೆಲುಗು ಟೈಟನ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬುಧವಾರ 46–29 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಸುಲಭವಾಗಿ ಸೋಲಿಸಿತು. ಭರತ್‌ ಅವರ ಪಾಲಿಗೆ ನೂರನೇಯದ್ದಾಗಿದ್ದ ಈ ಪಂದ್ಯ ಸ್ಮರಣೀಯವಾಯಿತು.

ರೇಡಿಂಗ್‌ನಲ್ಲಿ 16 ಪಾಯಿಂಟ್ ಮತ್ತು ಟ್ಯಾಕ್ಲಿಂಗ್‌ನಲ್ಲಿ ನಾಲ್ಕು ಪಾಯಿಂಟ್ ಪಡೆದ ಭರತ್ ತಂಡ ಮೇಲುಗೈ ಪಡೆಯಲು ನೆರವಾದರು. ಅವರಿಗೆ ಸಮರ್ಥ ಬೆಂಬಲ ನೀಡಿದ ವಿಜಯ್ ಮಲಿಕ್ ಎಂಟು ಪಾಯಿಂಟ್ಸ್ ಕಾಣಿಕೆ ನೀಡಿದರು. ಹರಿಯಾಣ ಸ್ಟೀಲರ್ಸ್ ಪರ ಮಯಂಕ್ ಸೈನಿ ಅವರು ಗರಿಷ್ಠ ಐದು ಪಾಯಿಂಟ್ಸ್ ಗಳಿಸಿದರು.

ADVERTISEMENT

ಇದು 13 ಪಂದ್ಯಗಳಲ್ಲಿ ಟೈಟನ್ಸ್‌ಗೆ ಎಂಟನೇ ಗೆಲುವು. ಸತತ ಐದನೇ ಗೆಲುವಿನೊಡನೆ 16 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನದಲ್ಲಿ ಮುಂದುವರಿಯಿತು. ಸ್ಟೀಲರ್ಸ್ 13 ಪಂದ್ಯಗಳಲ್ಲಿ ಏಳನೇ ಸೋಲು ಅನುಭವಿಸಿತು.

ಪುಣೇರಿ ಪಲ್ಟನ್‌ಗೆ ಜಯ

ಪುಣೇರಿ ಪಲ್ಟನ್ ತಂಡವು ದಿನದ ಇನ್ನೊಂದು ಪಂದ್ಯದಲ್ಲಿ 37–27ರಲ್ಲಿ ಹತ್ತು ಪಾಯಿಂಟ್‌ಗಳಿಂದ ಯು ಮುಂಬಾ ತಂಡವನ್ನು ಸೋಲಿಸಿತು. ಕೊನೆಯ ಎರಡು ನಿಮಿಷಗಳಲ್ಲಿ ಹತ್ತು ಪಾಯಿಂಟ್‌ ಗಳಿಸಿದ ಪಲ್ಟನ್‌ಗೆ ಇದು ಹತ್ತನೇ ಗೆಲುವಾಗಿದ್ದು, 20 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನದಲ್ಲಿ ಮುಂದುವರಿಯಿತು.

ಯು ಮುಂಬಾ ಈ ಸೋಲಿನ ಹೊರತಾಗಿಯೂ (6 ಗೆಲುವು, 6 ಸೋಲು) 12 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪುಣೇರಿ ತಂಡದ ಆದಿತ್ಯ ಶಿಂದೆ 14 ಪಾಯಿಂಟ್‌ ಗಳಿಸಿದರೆ, ಮುಂಬಾ ರೇಡರ್ ಅಜಿತ್ ಚೌಹಾನ್ ಸೂಪರ್ ಟೆನ್‌ (10) ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.