ADVERTISEMENT

ಪ್ರೊ ಕಬಡ್ಡಿ ಲೀಗ್: ನಿತಿನ್ ಮಿಂಚು; ಪಿಂಕ್ ಪ್ಯಾಂಥರ್ಸ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 21:28 IST
Last Updated 18 ಸೆಪ್ಟೆಂಬರ್ 2025, 21:28 IST
<div class="paragraphs"><p>ಬೆಂಗಾಲ್‌ ವಾರಿಯರ್ಸ್‌ನ ರೇಡರ್‌ ದೇವಾಂಕ್ ಅವರನ್ನು ಟ್ಯಾಕಲ್‌ ಮಾಡಲು ಯತ್ನಿಸಿದ ಪಿಂಕ್‌ ಪ್ಯಾಂಥರ್ಸ್‌ ಆಟಗಾರರು</p></div>

ಬೆಂಗಾಲ್‌ ವಾರಿಯರ್ಸ್‌ನ ರೇಡರ್‌ ದೇವಾಂಕ್ ಅವರನ್ನು ಟ್ಯಾಕಲ್‌ ಮಾಡಲು ಯತ್ನಿಸಿದ ಪಿಂಕ್‌ ಪ್ಯಾಂಥರ್ಸ್‌ ಆಟಗಾರರು

   

ಜೈಪುರ: ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ಸವಾಯಿ ಮಾನಸಿಂಗ್ ಕ್ರೀಡಾಂಗಣದ ಒಳಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಜೈಪುರ ತಂಡವು 45–41ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. 

ADVERTISEMENT

ನಿತಿನ್ ಕುಮಾರ್ (13 ಅಂಕ) ಅಮೋಘ ದಾಳಿಯ ಬಲದಿಂದ ಜೈಪುರ ತಂಡವು ಮುನ್ನಡೆ ಗಳಿಸಿತು. ಪ್ರಥಮಾರ್ಧದಲ್ಲಿ  24–18ರಿಂದ ಜೈಪುರ ತಂಡವು ಮುನ್ನಡೆಯಲ್ಲಿತ್ತು. ಆದರೆ ವಿರಾಮದ ನಂತರದ ಹಣಾಹಣಿಯಲ್ಲಿ ಭಾರಿ ಪೈಪೋಟಿ ನಡೆಯಿತು. ಈ ಅವಧಿಯಲ್ಲಿ ಬೆಂಗಾಲ್ ತಂಡವು 23–21ರಿಂದ  ಮೇಲುಗೈ ಸಾಧಿಸಿತು. ಆದರೆ ಮೊದಲ ಅವಧಿಯಲ್ಲಿ ಸಾಧಿಸಿದ್ದ ಮುನ್ನಡೆಯು ಜೈಪುರ ತಂಡಕ್ಕೆ ಗೆಲುವು ತಂದುಕೊಟ್ಟಿತು.  ನಿತಿನ್ ಕುಮಾರ್ ಅವರು 24 ಬಾರಿ ದಾಳಿ ನಡೆಸಿದರು. ಅದರಲ್ಲಿ ಅವರು 9 ಟಚ್ ಪಾಯಿಂಟ್ಸ್ ಮತ್ತು 4 ಬೋನಸ್ ಅಂಕಗಳನ್ನು ಗಳಿಸಿದರು  ಅಲಿ  ಚೌಬಾತರಶ್ ಅವರೂ 12 ಅಂಕ ಗಳಿಸಿದರು. ಅವರು 12 ರೇಡ್‌ಗಳಲ್ಲಿ 10 ಟಚ್ ಮತ್ತು 2 ಬೋನಸ್ ಅಂಕಗಳನ್ನು ಗಳಿಸಿದರು. 

ಬೆಂಗಾಲ್ ತಂಡದ ನಾಯಕ ದೇವಾಂಕ್ ಅವರು ಚುರುಕಾದ ದಾಳಿಯ ಮೂಲಕ 16 ಅಂಕ ಗಳಿಸಿದರು. ದೇವಾಂಕ್ ಅವರು ಪ್ರೊ ಕಬಡ್ಡಿಯಲ್ಲಿ ಒಟ್ಟು 400 ಅಂಕಗಳನ್ನು ಗಳಿಸಿದ ಸಾಧನೆ ಮೆರೆದರು. ಈ ಪಂದ್ಯದಲ್ಲಿ ದೇವಾಂಕ್ ಅವರು 24 ಬಾರಿ ರೇಡಿಂಗ್ ಮಾಡಿದರು. ಅದರಲ್ಲಿ 12 ಟಚ್ ಪಾಯಿಂಟ್ ಮತ್ತು 4 ಬೋನಸ್ ಅಂಕ ಗಳಿಸಿದರು. 

ದೇವಾಂಕ್  ಅವರಿಗೆ ಉತ್ತಮ ಜೊತೆ ನೀಡಿದ ಮನ್‌ಪ್ರೀತ್ 10 ಅಂಕಗಳ ಕಾಣಿಕೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.