ADVERTISEMENT

ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್ ವಾರಿಯರ್ಸ್ ತಂಡಕ್ಕೆ ದೇವಾಂಕ್ ದಲಾಲ್ ನಾಯಕ

ಪಿಟಿಐ
Published 26 ಆಗಸ್ಟ್ 2025, 14:29 IST
Last Updated 26 ಆಗಸ್ಟ್ 2025, 14:29 IST
ದೇವಾಂಕ್ ದಲಾಲ್
ದೇವಾಂಕ್ ದಲಾಲ್   

ಕೋಲ್ಕತ್ತ: ತಾರಾ ರೇಡರ್ ದೇವಾಂಕ್ ದಲಾಲ್ ಅವರು ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) 12ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

ಅನುಭವಿ ಡಿಫೆಂಡರ್‌ ನಿತೇಶ್‌ ಕುಮಾರ್‌ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡಿರುವುದಾಗಿ ಫ್ರಾಂಚೈಸಿಯು ಮಂಗಳವಾರ ತಿಳಿಸಿದೆ.

ಬೆಂಗಾಲ್ ವಾರಿಯರ್ಸ್ ತಂಡವು 25 ವರ್ಷ ವಯಸ್ಸಿನ ದಲಾಲ್‌ ಅವರಿಗೆ ₹2.205 ಕೋಟಿ ನೀಡಿ ಖರೀದಿಸಿತ್ತು. ಇದು ಪಿಕೆಎಲ್‌ನಲ್ಲಿ ಭಾರತೀಯ ಆಟಗಾರ ಪಡೆದ ಅತಿ ಹೆಚ್ಚಿನ ಸಂಭಾವನೆಯಾಗಿದೆ.

ADVERTISEMENT

ಎರಡು ವರ್ಷಗಳ ಹಿಂದೆ ದೇವಾಂಕ್‌ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಆದರೂ, ಕಳೆದ ಆವೃತ್ತಿಯಲ್ಲಿ ಅವರು ದಾಖಲೆಯ 301 ರೇಡ್‌ ಪಾಯಿಂಟ್ಸ್‌ಗಳನ್ನು ಪಡೆದು, ಭರ್ಜರಿ ಪುನರಾಗಮನ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.