ADVERTISEMENT

Pro Kabaddi League | ಪಟ್ನಾ ವಿರುದ್ಧ ಜಯ: ಗೆಲುವಿನ ಹಳಿಗೆ ಬೆಂಗಳೂರು ಬುಲ್ಸ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:34 IST
Last Updated 7 ಸೆಪ್ಟೆಂಬರ್ 2025, 2:34 IST
<div class="paragraphs"><p>ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಟ್ನಾ ರೇಡರ್‌ನನ್ನು ಹಿಡಿದೆಳೆದ ಬುಲ್ಸ್‌ ಆಟಗಾರರು</p></div>

ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಟ್ನಾ ರೇಡರ್‌ನನ್ನು ಹಿಡಿದೆಳೆದ ಬುಲ್ಸ್‌ ಆಟಗಾರರು

   

ವಿಶಾಖಪಟ್ಟಣ: ಅಲಿರೆಜಾ ಮಿರ್ಜೈಯನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು 38–30 ಅಂಕಗಳಿಂದ ಸೋಲಿಸಿ ಮೊದಲ ಗೆಲುವು ದಾಖಲಿಸಿತು.

ಬುಲ್ಸ್ ತಂಡ ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಈ ಗೆಲುವಿನೊಂದಿಗೆ ತಂಡದ ಖಾತೆಯಲ್ಲಿ ಎರಡು ಅಂಕ ಸೇರಿತು.

ADVERTISEMENT

ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರಾಮದ ವೇಳೆಗೆ 18–15ರಲ್ಲಿ ಮೂರು ಪಾಯಿಂಟ್‌ಗಳ ಅಲ್ಪ ಮುನ್ನಡೆ ಪಡೆದಿತ್ತು.

ಬೆಂಗಳೂರು ಬುಲ್ಸ್‌ ಪರ ಅಲಿರೆಜಾ ಮಿರ್ಜೈಯನ್ (10 ಅಂಕ) ಮಿಂಚಿದರೆ, ಆಶಿಶ್ ಮಲಿಕ್ (8 ಅಂಕ),
ಯೋಗೇಶ್ (3 ಅಂಕ) ಮತ್ತು ದೀಪಕ್ (4 ಅಂಕ) ಅವರೂ ಉಪಯುಕ್ತ ಕೊಡುಗೆ ನೀಡಿದರು. ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ಪರ ಆಯಾನ್ (10 ಅಂಕ) ಮಿಂಚಿದರೆ, ಡಿಫೆಂಡರ್‌ಗಳಾದ ದೀಪಕ್(3) ಮತ್ತು ಸುಧಾಕರ್ 6 ಅಂಕ ಗಳಿಸಿ ತಂಡದ ಹೋರಾಟ ನೀಡಲು ನೆರವಾದರು.

ಬುಲ್ಸ್ ತಂಡ ಇದೇ 8ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್  ಹರಿಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ.

ಭಾನುವಾರದ ಪಂದ್ಯಗಳು: ಬೆಂಗಾಲ್ ವಾರಿಯರ್ಸ್‌– ತೆಲುಗು ಟೈಟನ್ಸ್ (ರಾತ್ರಿ 8)

ದಬಾಂಗ್ ಡೆಲ್ಲಿ ಕೆ.ಸಿ.– ಜೈಪುರ ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 9).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.