ADVERTISEMENT

ಪ್ರೊ. ಕಬಡ್ಡಿ: ಬೆಂಗಳೂರು ಬುಲ್ಸ್‌ ಪರಾಭವ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 4:22 IST
Last Updated 22 ಜನವರಿ 2024, 4:22 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಹೈದರಾಬಾದ್‌: ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಯಲ್ಲಿ ತಮಿಳ್‌ ತಲೈವಾಸ್ ಎದುರು ಪರಾಭವಗೊಂಡಿತು. 

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ತಲೈವಾಸ್ 45–28 ರಿಂದ ಬುಲ್ಸ್ ತಂಡವನ್ನು ಸೋಲಿಸಿತು. ತಲೈವಾಸ್ ಪರ ರೈಡರ್‌ಗಳಾದ ನರೇಂದ್ರ ಹೋಶಿಯಾರ್ 14, ಅಜಿಂಕ್ಯ ಪವಾರ್ 11 ಪಾಯಿಂಟ್ಸ್ ಗಳಿಸಿ ಮಿಂಚಿದರು. ಬುಲ್ಸ್ ಆಡಿರುವ 15 ಪಂದ್ಯಗಳಿಂದ ಆರು ಗೆದ್ದು, 9 ಸೋತು 9ನೇ ಸ್ಥಾನದಲ್ಲಿದೆ. 

ADVERTISEMENT

ಬುಲ್ಸ್ ಕಡೆ ಅಕ್ಷಿತ್ ಧುಲ್ 12, ಸುಶೀಲ್ 6 ಅಂಕ ಸಂಪಾದಿಸಿದರು. ತಲೈವಾಸ್‌ 14 ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದು, ಹತ್ತನೇ ಸ್ಥಾನದಲ್ಲಿದೆ. 

ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು 34–24 ರಿಂದ ಸೋಲಿಸಿತು. ಪಲ್ಟನ್‌ ಪರ  ಮೊಹಮ್ಮದ್‌ರೇಝಾ 9, ಮೋಹಿತ್ ಗೋಯತ್ 7 ಅಂಕ ಕಲೆ ಹಾಕಿದರು. ಗುಜರಾತ್ ಪರ ಎಸ್ಮಾಯಿಲ್ ನಬಿಬಕ್ಷ್ 7, ಪಾರ್ಟಿಕ್ ದಹಿಯಾ 5 ಅಂಕ ಗಳಿಸಿದರು. ಪಲ್ಟನ್ 57 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ,  44 ‍ಪಾಯಿಂಟ್ಸ್‌ಗಳೊಂದಿಗೆ ಗುಜರಾತ್‌ ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.