
ಪುತ್ತೂರು (ದಕ್ಷಿಣ ಕನ್ನಡ): ತೆಲಂಗಾಣದ ಆಟಗಾರ, ಇಂಟರ್‌ನ್ಯಾಷನಲ್ ಮಾಸ್ಟರ್ ಚಕ್ರವರ್ತಿ ಎಂ ರೆಡ್ಡಿ ಇಲ್ಲಿ ನಡೆದ ಪಿಟಿಸಿಎ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ನೆಹರು ನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯ 9 ಸುತ್ತುಗಳಲ್ಲೂ ಅಜೇಯರಾಗಿ ಉಳಿದರು. ಇಂಟರ್‌ನ್ಯಾಷನಲ್ ಮಾಸ್ಟರ್ ಬೆಂಗಳೂರಿನ ರವಿಗೋಪಾಲ್ ಹೆಗ್ಡೆ ಸೇರಿದಂತೆ 6 ಮಂದಿ 7.5 ಪಾಯಿಂಟ್ ಗಳಿಸಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ದಕ್ಷಿಣ ಕನ್ನಡದ ರವೀಶ್ ಕೋಟೆ ಮತ್ತು ಲಕ್ಷಿತ್ ಸಾಲಿಯಾನ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದರು. ರವಿಗೋಪಾಲ್, ದಕ್ಷಿಣ ಕನ್ನಡದ ವಿಹಾನ್ ಶೆಟ್ಟಿ, ಆರುಷಿ ಸೆವೆರಿನ್ ಡಿಸಿಲ್ವಾ ಮತ್ತು ಧನುಷ್ ರಾಮ್ ಕ್ರಮವಾಗಿ 4ರಿಂದ 7ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.
ಚಾಂಪಿಯನ್ ಚಕ್ರವರ್ತಿ ₹ 30 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ರವೀಶ್‌ಗೆ ₹ 23 ಸಾವಿರ ಮತ್ತು ಟ್ರೋಫಿ, ಲಕ್ಷಿತ್, ರವಿಗೋಪಾಲ್ ಮತ್ತು ವಿಹಾನ್ ಶೆಟ್ಟಿಗೆ ಕ್ರಮವಾಗಿ ₹ 18 ಸಾವಿರ, ₹ 15 ಸಾವಿರ ಮತ್ತು ₹ 10 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು. ಇಂಟರ್‌ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ 7 ಪಾಯಿಂಟ್‌ಗಳೊಂದಿಗೆ 11ನೇ ಸ್ಥಾನಕ್ಕೆ ಕುಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.