ADVERTISEMENT

ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕರ್ನಾಟಕ ತಂಡಗಳು

ಪಿಯು ವಿದ್ಯಾರ್ಥಿಗಳ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಫೈನಲ್‌ಗೆ ಲಗ್ಗೆ ಇರಿಸಿದ ಪಂಜಾಬ್, ಕೇರಳ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 13:53 IST
Last Updated 28 ಡಿಸೆಂಬರ್ 2025, 13:53 IST
ನೆಟ್‌ಬಾಲ್
ನೆಟ್‌ಬಾಲ್   

ಮಂಗಳೂರು: ರೋಚಕ ಹೋರಾಟದಲ್ಲಿ ಕೇವಲ ಒಂದು ಪಾಯಿಂಟ್‌ನಿಂದ ಎದುರಾಳಿ ತಂಡವನ್ನು ಮಣಿಸಿದ ಕರ್ನಾಟಕದ ಬಾಲಕರು ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಆತಿಥೇಯ ಬಾಲಕಿಯರ ತಂಡವೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು. 

ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಪಿಲಿಕುಳದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ವಿಭಾಗದಲ್ಲಿ ಚಂಡೀಗಢವನ್ನು ಕರ್ನಾಟಕ 31–30ರಲ್ಲಿ ಮಣಿಸಿತು. ನಾಲ್ಕರ ಘಟ್ಟದ ಮತ್ತೊಂದು ರೋಮಾಂಚಕಾರಿ ಹಣಾಹಣಿಯಲ್ಲಿ ಕೇರಳವನ್ನು ಪಂಜಾಬ್ 39–38ರಲ್ಲಿ ಸೋಲಿಸಿತು. 

ಬಾಲಕಿಯರ ವಿಭಾಗದಲ್ಲಿ ಆಧಿಪತ್ಯ ಮುಂದುವರಿಸಿದ ಕರ್ನಾಟಕ ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರವನ್ನು 24–14ರಲ್ಲಿ ಮಣಿಸಿತು. ಪಂಜಾಬ್ ವಿರುದ್ಧ ಕೇರಳ 32–27ರಲ್ಲಿ ಜಯ ಸಾಧಿಸಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.