ADVERTISEMENT

Iran-Israel War: ದುಬೈನಲ್ಲಿ ಸಿಲುಕಿದ ಪಿ.ವಿ. ಸಿಂಧು

ಪಿಟಿಐ
Published 1 ಮಾರ್ಚ್ 2026, 6:43 IST
Last Updated 1 ಮಾರ್ಚ್ 2026, 6:43 IST
   

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಅವರು ಶನಿವಾರ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿಯಿಂದಾಗಿ ವಿಮಾನ ಕಾರ್ಯಾಚರಣೆ ಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಗೆ ಹೊರಟಿದ್ದ ಸಿಂಧು ಅವರು ದುಬೈನಲ್ಲಿ ಸಿಲುಕಿದರು. ಆ ಟೂರ್ನಿಯು ಮಂಗಳವಾರ ಆರಂಭವಾಗಲಿದೆ. ದುಬೈನಲ್ಲಿ ತಮ್ಮ ತಂಡದೊಂದಿಗೆ ಸುರಕ್ಷಿತವಾಗಿ ಇರುವುದಾಗಿ ಸಿಂಧು ತಿಳಿಸಿದ್ದಾರೆ. 

ದುಬೈ ವಿಮಾನ ನಿಲ್ದಾಣದಲ್ಲಿನ ಜನದಟ್ಟಣೆಯ ವಿಡಿಯೊವೊಂದನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಂಧು, ‘ಮುಂದಿನ ಸೂಚನೆ ಬರುವವರೆಗೂ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಬರೆದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.