ADVERTISEMENT

PVL: ಗೋವಾ ಗಾರ್ಡಿಯನ್ ವಾಲಿಬಾಲ್ ತಂಡದ ಸಹ ಮಾಲೀಕರಾದ ಕೆ.ಎಲ್. ರಾಹುಲ್

ಪಿಟಿಐ
Published 22 ಸೆಪ್ಟೆಂಬರ್ 2025, 12:35 IST
Last Updated 22 ಸೆಪ್ಟೆಂಬರ್ 2025, 12:35 IST
ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್ 
ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್    

ಪಣಜಿ: ಹೈದರಾಬಾದ್‌ನಲ್ಲಿ ಅಕ್ಟೋಬರ್ 2 ರಿಂದ 26 ರವರೆಗೆ ನಡೆಯಲಿರುವ ಪ್ರೈಮ್ ವಾಲಿಬಾಲ್ ಲೀಗ್‌ ಸೀಸನ್‌–4ಕ್ಕೆ ಮುಂಚಿತವಾಗಿ ಕನ್ನಡಿಗ ಕೆಎಲ್ ರಾಹುಲ್ ಅವರು ಗೋವಾ ಗಾರ್ಡಿಯನ್ ತಂಡಕ್ಕೆ ಸಹ ಮಾಲೀಕರಾಗಿದ್ದಾರೆ.

ವಾಲಿಬಾಲ್ ತಂಡದ ಸಹ ಮಾಲೀಕರಾಗಿರುವ ಕುರಿತು ಮಾತನಾಡಿರುವ ರಾಹುಲ್, ‘ಇದು ನನಗೆ ಸಂತಸದ ಕ್ಷಣವೆಂದು ಭಾವಿಸುತ್ತೇನೆ, ಪಿವಿಎಲ್ ಭಾರತೀಯ ಕ್ರೀಡೆಗೆ ಮಹತ್ವದ ತಿರುವು ಇದ್ದಂತೆ. ಈ ಮೂಲಕ ವಾಲಿಬಾಲ್‌ ಅನ್ನು ಅತಿ ಹೆಚ್ಚು ಜನರು ಪ್ರೀತಿಸುವಂತೆ ಮಾಡಬಹುದು‘ ಎಂದರು.

‘ವಾಲಿಬಾಲ್ ನನ್ನ ನೆಚ್ಚಿನ ಕ್ರೀಡೆಗಳಲ್ಲಿ ಒಂದು. ಭಾರತದಲ್ಲಿ ಈ ಕ್ರೀಡೆಯನ್ನು ಮತ್ತಷ್ಟು ಬೆಳೆಸಲು ನನ್ನ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ‘ ಎಂದು ತಿಳಿಸಿದರು.

ADVERTISEMENT

ಪ್ರೈಮ್ ವಾಲಿಬಾಲ್ ಲೀಗ್‌ ಸೀಸನ್–4ರಲ್ಲಿ ಪದಾರ್ಪಣೆ ಮಾಡಲಿರುವ ಗೋವಾ ಗಾರ್ಡಿಯನ್ಸ್ ತಂಡವನ್ನು ಟಿವಿ ಮತ್ತು ಡಿಜಿಟಲ್ ಪ್ರೇಕ್ಷಕರನ್ನು ಸೆಳೆಯಲು ಕಟ್ಟಲಾಗಿದೆ. ಈ ತಂಡ ಟೂರ್ನಿಯಲ್ಲಿನ ಬಲಿಷ್ಠ ತಂಡಳೊಂದಿಗೆ ಸೆಣಸಾಡಲಿದೆ.

ಗೋವಾ ಗಾರ್ಡಿಯನ್ಸ್‌ನ ತಂಡದ ಪ್ರಧಾನ ಮಾಲೀಕ ಮತ್ತು ನೆಟೆನ್ರಿಚ್‌ನ ಸಂಸ್ಥಾಪಕ ರಾಜು ಚೇಕುರಿ ಮಾತನಾಡಿ, ‘ಕೆಎಲ್ ರಾಹುಲ್ ಅವರು ನಮ್ಮ ಮಾಲೀಕತ್ವದ ಗ್ರೂಪ್‌ಗೆ ಸೇರಿರುವುದು ಸಂತೋಷವಾಗಿದೆ. ವಾಲಿಬಾಲ್ ಆಟದ ಕುರಿತು ಅವರಿಗಿರುವ ಉತ್ಸಾಹ ಮತ್ತು ಅದರ ಸಾಮರ್ಥ್ಯದ ಮೇಲಿನ ನಂಬಿಕೆ ಅಭಿಮಾನಿಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಲಿದೆ. ಮಾತ್ರವಲ್ಲ, ಕ್ರೀಡಾಪಟುಗಳಿಗೆ ಅಧಿಕಾರ ನೀಡುವ ಫ್ರಾಂಚೈಸಿ ನಿರ್ಮಿಸಲು ನಮಗೆ ಸಹಕಾರಿಯಾಗಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.