ಸಾಂದರ್ಭಿಕ ಚಿತ್ರ
ಕೊಯಮತ್ತೂರು: ಬೆಂಗಳೂರಿನ ಅನೀಶ್ ಡಿ.ಶೆಟ್ಟಿ ಮತ್ತು ಪುದುಚೇರಿಯ ನವನೀತ್ ಕುಮಾರ್ ಅವರು ಇಲ್ಲಿನ ಕಾರಿ ಮೋಟರ್ ಸ್ಪೀಡ್‌ವೇನಲ್ಲಿ ನಡೆದ ಜೆಕೆ ಟೈರ್ ಎಫ್‌ಎಂಎಸ್‌ಸಿಎಐ ರೇಸಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ಅಂತಿಮ ದಿನವಾದ ಭಾನುವಾರ ಗಮನ ಸೆಳೆದರು.
ಆರ್‌ಇ ಕಾಂಟಿನೆಂಟಲ್ ಜಿಟಿ ಕಪ್‌ನ ಎರಡನೇ ರೇಸ್‌ನಲ್ಲಿ (10 ಲ್ಯಾಪ್) ಅನೀಶ್ (13:10.550) ಮೊದಲಿಗರಾದರು. ನವನೀತ್ ಎರಡನೇ ಸ್ಥಾನ ಪಡೆದರು. ಆದರೆ ಮೂರನೇ ರೇಸ್‌ನಲ್ಲಿ ನವನೀತ್ (13:21.934) ಅಗ್ರಸ್ಥಾನದೊಡನೆ ಮಿಂಚಿದರು. ಜೆಕೆ ಟೈರ್ಸ್ ಲೆವಿಡಾಸ್ ಕಪ್ ಮೂರನೇ ರೇಸ್‌ನಲ್ಲಿ ದೀಪಾಯನ್ ದತ್ತಾ (15:15:11.024) ಮತ್ತು ನಾಲ್ಕನೇ ರೇಸ್‌ನಲ್ಲಿ ಜೈ ಪ್ರಶಾಂತ್ (14:38.490) ಮೊದಲಿಗರಾಗಿ ಗುರಿ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.