ADVERTISEMENT

ಬ್ರಿಸ್ಬೇನ್ ಇಂಟರ್‌ನ್ಯಾಷನಲ್‌ ಟೂರ್ನಿ: ನಡಾಲ್‌ ಪರಾಭವ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 16:10 IST
Last Updated 5 ಜನವರಿ 2024, 16:10 IST
ರಫೆಲ್ ನಡಾಲ್
ರಫೆಲ್ ನಡಾಲ್   

ಬ್ರಿಸ್ಬೇನ್ (ಆಸ್ಟ್ರೇಲಿಯಾ): ಪುನರಾಗಮದ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್‌ ನಡಾಲ್ ಅವರು ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ  ಜೋರ್ಡಾನ್‌ ಥಾಂಪ್ಸನ್‌ ವಿರುದ್ಧ ಸೋತರು. ಇದರೊಂದಿಗೆ ಮೂರು ಪಂದ್ಯಗಳ ಅಂಕಗಳನ್ನು ಕಳೆದುಕೊಂಡಿದ್ದಾರೆ.

ಬ್ರಿಸ್ಬೇನ್ ಇಂಟರ್‌ನ್ಯಾಷನಲ್‌ ಟೂರ್ನಿಯ ಪಂದ್ಯದಲ್ಲಿ 55ನೇ ಶ್ರೇಯಾಂಕದ ಥಾಂಪ್ಸನ್ 5-7, 7-6 (6), 6-3 ಸೆಟ್‌ಗಳಿಂದ  ನಡಾಲ್‌ ಅವರನ್ನು ಸೊಲಿಸಿದರು. 22 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ 37 ವರ್ಷದ ನಡಾಲ್,  ಎರಡನೇ ಸೆಟ್‌ನ 10 ನೇ ಗೇಮ್‌ನಲ್ಲಿ ಒಂದು ಮ್ಯಾಚ್ ಪಾಯಿಂಟ್ ಮತ್ತು ಟೈಬ್ರೇಕರ್‌ನಲ್ಲಿ ಇನ್ನೂ ಎರಡು ಮ್ಯಾಚ್ ಪಾಯಿಂಟ್ ಪರಿವರ್ತಿಸಲು ವಿಫಲರಾದರು.

ಡೊಮಿನಿಕ್ ಥೀಮ್ (ಆಸ್ಟ್ರಿಯಾ) ಮತ್ತು ಜೇಸನ್ ಕುಬ್ಲರ್ ವಿರುದ್ಧ ನೇರ ಸೆಟ್ ಗಳ ಜಯದೊಂದಿಗೆ ಪಂದ್ಯಾವಳಿ ಪ್ರಾರಂಭಿಸಿದ ಸ್ಪೇನ್ ಆಟಗಾರ  3 ಗಂಟೆ 25 ನಿಮಿಷ ನಡೆದ ಮೂರನೇ ಪಂದ್ಯದಲ್ಲಿ ಥಾಂಪ್ಸನ್ ವಿರುದ್ದ ಪರಾಭವಗೊಂಡರು.‌

ADVERTISEMENT

ಗಾಯದ ಕಾರಣದಿಂದ ಒಂದು ವರ್ಷ ಅಂಕಣದಿಂದ ದೂರ ಉಳಿದಿದ್ದ ನಡಾಲ್, ಬ್ರಿಸ್ಬೇನ್ ಟೂರ್ನಿಯಲ್ಲಿ ಕಣಕ್ಕೆ ಇಳಿದಿದ್ದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.