ADVERTISEMENT

ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್‌ ಟೂರ್ನಿ; ಬೆಳ್ಳಿ ಗೆದ್ದ ರಾಹಿ ಸರ್ನೋಬತ್‌

ಜರ್ಮನಿಯ ವೆನ್ನೆಕಾಂಪ್‌ಗೆ ಚಿನ್ನ

ಪಿಟಿಐ
Published 9 ನವೆಂಬರ್ 2021, 11:43 IST
Last Updated 9 ನವೆಂಬರ್ 2021, 11:43 IST
ರಾಹಿ ಸರ್ನೋಬತ್‌ –ಪಿಟಿಐ ಚಿತ್ರ
ರಾಹಿ ಸರ್ನೋಬತ್‌ –ಪಿಟಿಐ ಚಿತ್ರ   

ರೋಕ್ಲಾ, ಪೋಲೆಂಡ್‌: ಪಿಸ್ತೂಲ್‌ನ ಅಸಮರ್ಪಕ ಕಾರ್ಯನಿರ್ವಹಣೆಯ ನಡುವೆಯೂ ಮಿನುಗಿದ ಭಾರತದ ರಾಹಿ ಸರ್ನೋಬತ್‌ ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್ ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.

ಮಂಗಳವಾರ ಮಹಿಳೆಯರ 25 ಮೀಟರ್ಸ್ ಪಿಸ್ತೂಲು ವಿಭಾಗದಲ್ಲಿ ಅವರಿಗೆ ಪದಕ ಒಲಿಯಿತು. ಫೈನಲ್‌ನಲ್ಲಿ ಅವರು 31 ಸ್ಕೋರ್‌ ದಾಖಲಿಸಿದರು.

ಪಿಸ್ತೂಲ್‌ನಲ್ಲಿ ಸಮಸ್ಯೆ ಕಂಡುಬರುವ ಮುನ್ನ ಅವರು ಫೈನಲ್‌ ತಲುಪುವ ಹಾದಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು.

ADVERTISEMENT

ಸ್ಪ‍ರ್ಧೆಯಲ್ಲಿ ಫೈನಲ್ ತಲುಪಿದ್ದ ಭಾರತದ ಇನ್ನೋರ್ವ ಶೂಟರ್ ಮನು ಭಾಕರ್ ಆರನೇ ಸ್ಥಾನ ಗಳಿಸಿದರು. ಜರ್ಮನಿಯ ವೆನ್ನೆಕ್ಯಾಂಪ್‌ 33 ಸ್ಕೋರ್‌ನೊಂದಿಗೆ ಚಿನ್ನದ ಪದಕ ಗೆದ್ದರೆ, ಫ್ರಾನ್ಸ್‌ನ ಮತಿಲ್ದೆ ಲ್ಯಾಮೊಲ್ಲೆ ಕಂಚು ತಮ್ಮದಾಗಿಸಿಕೊಂಡರು.

ಟೂರ್ನಿಯ ಪುರುಷರ 10 ಮೀಟರ್ಸ್ ಏರ್ ಪಿಸ್ತೂಲು ಸ್ಪರ್ಧೆಯಲ್ಲಿ ಸೌರಭ್ ಚೌಧರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಮನು ಭಾಕರ್ ಮತ್ತು ಇರಾನ್‌ನ ಜವಾದ್‌ ಫರೋಗಿ ಜೊತೆಯಾಗಿ ಏರ್ ಪಿಸ್ತೂಲು ಮಿಶ್ರ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.