ಶೂಟಿಂಗ್
ಶಿಮ್ಕೆಂಟ್ (ಕಜಕಸ್ತಾನ), (ಪಿಟಿಐ): ಪಿಸ್ತೂಲ್ ಶೂಟರ್ ಸ್ಪರ್ಧಿ ರಾಜಕನ್ವರ್ ಸಿಂಗ್ ಸಂಧು 25 ಮೀ. ಸೆಂಟರ್ ಫೈರ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರೆ, ಮಾಜಿ ವಿಶ್ವ ಚಾಂಪಿಯನ್ ಅಂಕುರ್ ಮಿತ್ತಲ್ ಡಬಲ್ ಟ್ರ್ಯಾಪ್‌ನಲ್ಲಿ ಸ್ವರ್ಣ ವಿಜೇತರಾದರು. ಇದರೊಂದಿಗೆ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಒಲಿಂಪಿಕ್‌ಯೇತರ ಸ್ಪರ್ಧೆಗಳಲ್ಲೂ ಭಾರತ ಪ್ರಾಬಲ್ಯ ಮೆರೆಯಿತು.
ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟಾರೆ 52 ಚಿನ್ನ, 26 ಬೆಳ್ಳಿ, 25 ಕಂಚು ಸೇರಿದಂತೆ 103 ಪದಕಗಳನ್ನು ಗೆದ್ದುಕೊಂಡಿತು.
ಸೀನಿಯರ್ ವಿಭಾಗ ಒಂದರಲ್ಲೇ ಭಾರತ 14 ಚಿನ್ನ, ಎಂಟು ಬೆಳ್ಳಿ, ಒಂಬತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಚೀನಾದ (15 ಚಿನ್ನ, 12 ಬೆಳ್ಳಿ, 3 ಕಂಚು) ನಂತರ ಎರಡನೇ ಸ್ಥಾನ ಪಡೆಯಿತು.
ಮಹಿಳೆಯರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಭಾರತ ‘ಕ್ಲೀನ್ ಸ್ವೀಪ್’ ಮಾಡಿತು. ಅನುಷ್ಕಾ ಭಾಟಿ (93), ಪ್ರನಿಲ್ ಇಂಗಳೆ (89) ಮತ್ತು ಹಫೀಜ್ ಕಾಂಟ್ರಾಕ್ಟರ್ (87) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು. ಈ ಮೂವರು ಒಟ್ಟು 269 ಅಂಕಗಳೊಡನೆ ತಂಡ ವಿಭಾಗದಲ್ಲೂ ಭಾರತ ಚಿನ್ನ ಗೆಲ್ಲುವಲ್ಲಿ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.