ADVERTISEMENT

ಪ್ಯಾರಾ ಅಥ್ಲೆಟಿಕ್ಸ್: ರಕ್ಷಿತಾ, ಶರತ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 0:22 IST
Last Updated 13 ಜುಲೈ 2025, 0:22 IST
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಏಳನೇ ಭಾರತೀಯ ಓಪನ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಟಿ 64 ಪುರುಷರ ವಿಭಾಗದ 200 ಮೀಟರ್ ಓಟದಲ್ಲಿ ಎಸ್ ಎಸ್ ಸಿ ಬಿ ಯ ಅಜಯ್ ಕುಮಾರ್ ಅವರು ಸ್ವರ್ಣ ಗೆದ್ದರು. / ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಕರ್ನಾಟಕದ ರಕ್ಷಿತಾ ರಾಜು ಮತ್ತು ಶರತ್ ಮಾಕನಹಳ್ಳಿ ಶಂಕರಪ್ಪ ಅವರು ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಏಳನೇ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು. 

ಮಹಿಳೆಯರ 1500 ಮೀಟರ್ ಓಟದಲ್ಲಿ (ಟಿ12, ಟಿ12 ಮತ್ತು ಟಿ13) ರಕ್ಷಿತಾ ರಾಜು ಅವರು ಚಿನ್ನದ ಸಾಧನೆ ಮಾಡಿದರು. ಅಂಧ ಅಥ್ಲೀಟ್‌ಗಳು ಭಾಗವಹಿಸಿದ ಈ ವಿಭಾಗದಲ್ಲಿ ರಕ್ಷಿತಾ 5ನಿಮಿಷ, 19.90ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ರಾಧಾ ವೆಂಕಟೇಶ್ (5ನಿ, 41.70ಸೆ) ಬೆಳ್ಳಿ ಪದಕ ಜಯಿಸಿದರು.

ಪುರುಷರ ವಿಭಾಗದ 5000 ಮೀಟರ್ಸ್ (ಟಿ11 ಮತ್ತು ಟಿ12) ವಿಭಾಗದಲ್ಲಿ ಶಂಕರಪ್ಪ (13ನಿ,50.90ಸೆ) ಚಿನ್ನದ ಪದಕ ಜಯಿಸಿದರು. 

ADVERTISEMENT

ಮಹಿಳೆಯರ ಶಾಟ್‌ಪಟ್‌ನಲ್ಲಿ ಮೇಧಾ ಜಯಂತ್ (5.18 ಮೀಟರ್ಸ್) ಬೆಳ್ಳಿ ಸಾಧನೆ ಮಾಡಿದರು. ಅವರು  ಎಫ್‌32, 33 ಮತ್ತು 34 ಕೆಟಗರಿಗಳಲ್ಲಿ ಈ ಸಾಧನೆ ಮಾಡಿದರು. ಶಾಟ್‌ಪಟ್ ಎಫ್‌57 ವಿಭಾಗದಲ್ಲಿ ಶಿಲ್ಪಾ ಕಂಚುಗರಕೊಪ್ಪಲು (6.50 ಮೀ) ಎರಡನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.