ADVERTISEMENT

ಡೋಪಿಂಗ್: ಮ್ಯಾರಥಾನ್ ಅಥ್ಲೀಟ್‌ಗೆ 5 ವರ್ಷ ನಿಷೇಧ

ಪಿಟಿಐ
Published 29 ಏಪ್ರಿಲ್ 2025, 19:10 IST
Last Updated 29 ಏಪ್ರಿಲ್ 2025, 19:10 IST
ಡೋಪಿಂಗ್
ಡೋಪಿಂಗ್   

ನವದೆಹಲಿ: ಹೋದ ವರ್ಷ ಮುಂಬೈ ಹಾಫ್‌ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ರಾಮೇಶ್ವರ್ ಮುಂಜಾಲ್ ಅವರಿಗೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿಷೇಧ ಶಿಕ್ಷೆ ವಿಧಿಸಲಾಗಿದೆ. 

ನೌಕಾ ಪಡೆಯ ಮುಂಜಾಲ್ ಅವರ ಮೇಲೆ ಐದು ವರ್ಷಗಳ ನಿಷೇಧ ಹೇರಲಾಗಿದೆ. 27 ವರ್ಷದ ಮುಂಜಾಲ್ ಅವರು 1 ಗಂಟೆ 9 ನಿಮಿಷ ಮತ್ತು 3 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ನಂತರ ಅವರಿಂದ ಪಡೆಯಲಾದ ಮೂತ್ರದ ಮಾದರಿಯ ಪರೀಕ್ಷೆ ನಡೆಸಲಾಯಿತು. 

ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿದ್ದು ದೃಢಪಟ್ಟಿತು. ಎರಿತ್ರೊಪಾಯಿ
ಟಿನ್ (ಇಪಿಒ) ಮತ್ತು ಡಾರ್ಬೆಪೊಟಿನ್ (ಡಿಇಪಿಒ) ಮದ್ದಿನ ಅಂಶಗಳಿದ್ದವು ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.