ADVERTISEMENT

ಒಲಿಂಪಿಕ್ಸ್ 2021: ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ

ಪಿಟಿಐ
Published 21 ಜೂನ್ 2021, 12:41 IST
Last Updated 21 ಜೂನ್ 2021, 12:41 IST
ರಾಣಿ ರಾಂಪಾಲ್ (ಪಿಟಿಐ ಸಂಗ್ರಹ ಚಿತ್ರ)
ರಾಣಿ ರಾಂಪಾಲ್ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ಒಲಿಂಪಿಕ್ಸ್‌ ಕೂಟದಲ್ಲಿ ಭಾಗವಹಿಸಲಿರುವ ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ಅವರನ್ನು ನಾಯಕಿಯನ್ನಾಗಿ ಘೋಷಿಸಲಾಗಿದೆ.

ದೀಪ್ ಗ್ರೇಸ್ ಎಕ್ಕಾ ಮತ್ತು ಸವಿತಾ ಅವರನ್ನು ಉಪ ನಾಯಕಿಯರನ್ನಾಗಿ ಆಯ್ಕೆ ಮಾಡಲಾಗಿದೆ.

ಒಲಿಂಪಿಕ್ಸ್‌ ಕೂಟದಲ್ಲಿ ಭಾಗವಹಿಸಲಿರುವ 16 ಸದಸ್ಯರ ಹಾಕಿ ತಂಡವನ್ನು ಭಾರತ ಕಳೆದ ವಾರ ಪ್ರಕಟಿಸಿತ್ತು. ನಾಯಕಿಯ ಹೆಸರು ಪ್ರಕಟಿಸಿರಲಿಲ್ಲ. ಆದರೆ, ರಾಣಿ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂಬುದು ಬಹುತೇಕ ಖಚಿತವಾಗಿತ್ತು.

ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವುದು ಬಹು ದೊಡ್ಡ ಗೌರವ. ತಂಡದ ಸಹ ಆಟಗಾರ್ತಿಯರು ಹಿರಿಯರಂತೆ ಜವಾಬ್ದಾರಿಯನ್ನು ಹಂಚಿಕೊಂಡಿರುವುದು ಕಳೆದ ಕೆಲವು ವರ್ಷಗಳಲ್ಲಿ ನಾಯಕಿಯಾಗಿ ನನ್ನ ಪಾತ್ರವನ್ನು ಸುಲಭಗೊಳಿಸಿದೆ ಎಂದು ರಾಣಿ ಹೇಳಿದ್ದಾರೆ.

ರಾಣಿ ಅವರ ನಾಯಕತ್ವದಲ್ಲಿ ಭಾರತ ತಂಡವು ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಸಾಧನೆ ತೋರಿದೆ. 2017ರ ಏಷ್ಯಾ ಕಪ್‌ ಗೆಲುವು, 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, 2019ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ಎಫ್‌ಐಎಚ್‌ ಸರಣಿಯ ಫೈನಲ್‌ನಲ್ಲಿ ಗೆಲುವು ರಾಣಿ ನಾಯಕತ್ವದ ಸಾಧನೆಯಾಗಿದೆ.

ರಾಣಿ ನಾಯಕತ್ವದಲ್ಲಿ ಭಾರತ ತಂಡವು 2018ರಲ್ಲಿ ಲಂಡನ್‌ನಲ್ಲಿ ನಡೆದ ಎಫ್‌ಐಎಚ್‌ ಮಹಿಳಾ ವಿಶ್ವಕಪ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ಗೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.