
ನವದೆಹಲಿ: ಡ್ರಾಗ್‌ಫ್ಲಿಕರ್ ರೋಹಿತ್ ಅವರು ಇದೇ 28ರಿಂದ ಡಿಸೆಂಬರ್ 10ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜೂನಿಯರ್ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.
ಟೂರ್ನಿಗಾಗಿ ಹಾಕಿ ಇಂಡಿಯಾ ಶುಕ್ರವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ತಂಡದ ಮಾಜಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಮಾರ್ಗದರ್ಶನದ ಆತಿಥೇಯ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಚಿಲಿ, ಸ್ವಿಟ್ಜರ್ಲೆಂಡ್ ಮತ್ತು ಒಮಾನ್ ತಂಡಗಳು ಇದೇ ಗುಂಪಿನಲ್ಲಿವೆ. ಪಾಕಿಸ್ತಾನಕ್ಕೆ ಬದಲಿಯಾಗಿ ಒಮಾನ್ ತಂಡ ಅವಕಾಶ ಪಡೆದಿದೆ.
‘ವಿಶ್ವಕಪ್ ಪೂರ್ವಸಿದ್ಧತಾ ಹಂತದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳ ಅನುಭವ ಹೊಂದಿದ್ದರೂ, ಬೆಂಗಳೂರಿನ ಸಾಯ್ ಕ್ಯಾಂಪಸ್‌ನಲ್ಲಿ ಸೀನಿಯರ್ ರಾಷ್ಟ್ರೀಯ ತಂಡದೊಂದಿಗೆ ಸಾಕಷ್ಟು ಪಂದ್ಯಗಳನ್ನು ಆಡಿ ಜೂನಿಯರ್ ತಂಡವನ್ನು ಸಜ್ಜುಗೊಳಿಸಿದ್ದೇವೆ’ ಎಂದು ಶ್ರೀಜೇಶ್ ಹೇಳಿದ್ದಾರೆ.
ಮಲೇಷ್ಯಾದಲ್ಲಿ ನಡೆದಿದ್ದ ಸುಲ್ತಾನ್ ಆಫ್ ಜೊಹೋರ್ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಡಿಫೆಂಡರ್ ರೋಹಿತ್ ಅವರಿಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದೆ. ಆ ಟೂರ್ನಿಯಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿತ್ತು. ಬಿಕ್ರಮ್‌ಜಿತ್ ಸಿಂಗ್ ಮತ್ತು ಪ್ರಿನ್ಸ್‌ದೀಪ್ ಸಿಂಗ್ ಅವರು ಗೋಲ್‌ಕೀಪಿಂಗ್ ಹೊಣೆ ನಿರ್ವಹಿಸಲಿದ್ದಾರೆ.
ತಂಡ ಹೀಗಿದೆ: ಗೋಲ್‌ಕೀಪರ್‌ಗಳು: ಬಿಕ್ರಮ್‌ಜಿತ್ ಸಿಂಗ್, ಪ್ರಿನ್ಸ್‌ದೀಪ್ ಸಿಂಗ್.
ಡಿಫೆಂಡರ್‌ಗಳು: ರೋಹಿತ್, ಅಮೀರ್ ಅಲಿ, ಅನ್ಮೋಲ್ ಎಕ್ಕಾ, ತಲೇಂ ಪ್ರಿಯೋಬರ್ತಾ, ಸುನಿಲ್ ಪಾಲಾಕ್ಷಪ್ಪ ಬೆನ್ನೂರು, ಶಾರದಾನಂದ್ ತಿವಾರಿ.
ಮಿಡ್‌ಫೀಲ್ಡರ್‌ಗಳು: ಅಂಕಿತ್ ಪಾಲ್, ಅದ್ರೋಹಿತ್ ಎಕ್ಕಾ, ತೌನೋಜಮ್ ಲುವಾಂಗ್, ಮನ್‌ಮೀತ್ ಸಿಂಗ್, ರೋಸನ್ ಕುಜೂರ್, ಗುರ್‌ಜೋತ್ ಸಿಂಗ್.
ಫಾರ್ವರ್ಡ್‌ಗಳು: ಸೌರಭ್ ಆನಂದ್ ಕುಶ್ವಾಹ, ಅರ್ಷ್‌ದೀಪ್ ಸಿಂಗ್, ಅಜಿತ್ ಯಾದವ್, ದಿಲ್‌ರಾಜ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.