ADVERTISEMENT

ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

ಪಿಟಿಐ
Published 23 ಡಿಸೆಂಬರ್ 2025, 0:43 IST
Last Updated 23 ಡಿಸೆಂಬರ್ 2025, 0:43 IST
<div class="paragraphs"><p>ಮನ್ಸುಖ್‌&nbsp;ಮಾಂಡವೀಯ</p></div>

ಮನ್ಸುಖ್‌ ಮಾಂಡವೀಯ

   

ನವದೆಹಲಿ: ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಸರ್ವಋತು ಹಾಕಿ ಟರ್ಫ್ ನಿರ್ಮಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಎಂಟು ಪಥಗಳ ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್ ಸೇರಿದಂತೆ ದೇಶದಾದ್ಯಂತ ಕೇಂದ್ರಗಳಲ್ಲಿ ಹಲವು ಮೂಲಸೌಕರ್ಯ ನವೀಕರಣ ಯೋಜನೆಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಆಡಳಿತ ಮಂಡಳಿ ಸೋಮವಾರ ಅನುಮೋದನೆ ನೀಡಿದೆ.

‘ದೇಶದ ಕ್ರೀಡಾ ವ್ಯವಸ್ಥೆಯು ಈಗ ಉತ್ತಮ ಪ್ರಗತಿಯ ಹಂತದಲ್ಲಿದೆ. ಅದು ಉಜ್ವಲ ಭವಿಷ್ಯವನ್ನು ಹೊಂದಲು ಸಾಧ್ಯವಿರುವ ಎಲ್ಲ ರೀತಿಯ ವ್ಯವಸ್ಥೆಗಳನ್ನು ಬಲಪಡಿಸುವುದು ಈ ಸಮಯದ ಅಗತ್ಯವಾಗಿದೆ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹೇಳಿದರು.

ADVERTISEMENT

‘ನಾವು ಇಂದು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅಥ್ಲೀಟ್‌ ಕೇಂದ್ರಿತ ವಾಗಿವೆ. ಕ್ರೀಡಾಪಟುಗಳಿಗೆ ಅಗತ್ಯವಿರುವ ಅತ್ಯುತ್ತಮ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಇದು ಕಾಮನ್‌ವೆಲ್ತ್‌ ಗೇಮ್ಸ್‌ ಮತ್ತು ಒಲಿಂಪಿಕ್‌ ಕೂಟಗಳಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಪೂರಕವಾಗಿದೆ’ ಎಂದು ತಿಳಿಸಿದರು.

ಭಾರತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಮತ್ತು ‘ಎ’ ಹಾಕಿ ತಂಡಗಳಿಗೆ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುವ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಪಾಲಿಗ್ರಾಸ್ ಪ್ಯಾರಿಸ್ ಗ್ರೀನ್‌ ಟೆಕ್ನಾಲಜಿ (ಜಿಟಿ) ಝೀರೊ ಹಾಕಿ ಟರ್ಫ್ ಅನ್ನು ಅಳವಡಿಸುವುದು ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳಲ್ಲಿ ಒಂದು. ಈ ಟರ್ಫ್ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ನಿಂದ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಇದಕ್ಕೆ ನೀರಿನ ಅಗತ್ಯತೆ ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.