ADVERTISEMENT

ಸಮಗ್ರ ತನಿಖೆ: ಸಾಯ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 13:48 IST
Last Updated 11 ಜೂನ್ 2022, 13:48 IST

ನವದೆಹಲಿ (ಪಿಟಿಐ): ಮಹಿಳಾ ಸೈಕ್ಲಿಸ್ಟ್‌ವೊಬ್ಬರು ರಾಷ್ಟ್ರೀಯ ತಂಡದ ಕೋಚ್‌ ಆರ್‌.ಕೆ.ಶರ್ಮ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ನಿರ್ಧರಿಸಿದೆ.

ಸ್ಲೊವೇನಿಯದಲ್ಲಿ ತರಬೇತಿ ಶಿಬಿರದ ವೇಳೆ ಕೋಚ್‌ ಅಸಭ್ಯವಾಗಿ ವರ್ತಿಸಿದ್ದಾಗಿ ಸೈಕ್ಲಿಸ್ಟ್‌ ದೂರು ನೀಡಿದ್ದರು.

’ಸಾಯ್‌ ತನಿಖಾ ತಂಡವು, ದೂರುದಾರ ಸೈಕ್ಲಿಸ್ಟ್‌ ಹಾಗೂ ಆರೋಪ ಎದುರಿಸುತ್ತಿರುವ ಕೋಚ್‌ ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿದೆ. ತಂಡದಲ್ಲಿದ್ದ ಇತರ ಐವರು ಸೈಕ್ಲಿಸ್ಟ್‌ಗಳನ್ನೂ ಮಾತನಾಡಿಸಿ, ಮಾಹಿತಿ ಕಲೆಹಾಕಲಾಗುವುದು‘ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.