ADVERTISEMENT

ಟೇಬಲ್‌ ಟೆನಿಸ್‌: ಸತ್ಯನ್‌ಗೆ ಅಚ್ಚರಿಯ ಗೆಲುವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 14:13 IST
Last Updated 17 ಜೂನ್ 2022, 14:13 IST
ಸತ್ಯನ್ ಜ್ಞಾನಶೇಖರನ್‌ – ಟ್ವಿಟರ್ ಚಿತ್ರ
ಸತ್ಯನ್ ಜ್ಞಾನಶೇಖರನ್‌ – ಟ್ವಿಟರ್ ಚಿತ್ರ   

ನವದೆಹಲಿ (ಪಿಟಿಐ): ಭಾರತದ ಸತ್ಯನ್ ಜ್ಞಾನಶೇಖರನ್‌ ಅವರು ಕ್ರೊವೇಷ್ಯದ ಜಗ್ರೆಬ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ವಿಶ್ವದ 6ನೇ ರ‍್ಯಾಂಕ್‌ನ ಆಟಗಾರ ಜಾರ್ಜಿಕ್ ಡಾರ್ಕೊ ಅವರಿಗೆ ಆಘಾತ ನೀಡಿದರು.

ಗುರುವಾರ ನಡೆದ ಹಣಾಹಣಿಯಲ್ಲಿ ಸತ್ಯನ್‌ 6-11 12-10 11-9 12-10 ರಲ್ಲಿ ಹಾಲಿ ಯುರೋಪಿಯನ್‌ ಚಾಂಪಿಯನ್‌ ಕೂಡಾ ಆಗಿರುವ ಸ್ಲೊವೇನಿಯದ ಆಟಗಾರನಿಗೆ ಸೋಲುಣಿಸಿ 16ರ ಘಟ್ಟ ಪ್ರವೇಶಿಸಿದರು.

’ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ 6ನೇ ರ‍್ಯಾಂಕ್‌ನ ಆಟಗಾರನ ವಿರುದ್ಧ ಬಲುದೊಡ್ಡ ಗೆಲುವು ಸಾಧಿಸಿದ್ದೇನೆ‘ ಎಂದು ಸತ್ಯನ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ 10ರೊಳಗಿನ ಸ್ಥಾನದಲ್ಲಿರುವ ಆಟಗಾರರನ್ನು ಮಣಿಸಿದ ಸಾಧನೆಯನ್ನು ಸತ್ಯನ್‌ ಎರಡನೇ ಬಾರಿ ಮಾಡಿದ್ದಾರೆ. 2019 ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅವರು ವಿಶ್ವದ 5ನೇ ರ‍್ಯಾಂಕ್‌ನ ಆಟಗಾರ ಜಪಾನ್‌ನ ತೊಮಕಜು ಹರಿಮೊಟೊ ವಿರುದ್ಧ ಗೆಲುವು ಸಾಧಿಸಿದ್ದರು.

ಬರ್ಮಿಂಗ್‌ಹ್ಯಾಂನಲ್ಲಿ ಜುಲೈ 28 ರಂದು ಆರಂಭವಾಗುವ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳುವ ಭಾರತ ಟಿಟಿ ತಂಡದಲ್ಲಿ ಸತ್ಯನ್‌ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.