ADVERTISEMENT

ಐಸಿಸಿ ರ್‍ಯಾಂಕಿಂಗ್‌: ಅಗ್ರ ಹತ್ತರಲ್ಲಿ ಶಫಾಲಿ ವರ್ಮಾ

ಪಿಟಿಐ
Published 15 ಜುಲೈ 2025, 16:10 IST
Last Updated 15 ಜುಲೈ 2025, 16:10 IST
ಶಫಾಲಿ ವರ್ಮಾ
ಶಫಾಲಿ ವರ್ಮಾ   

ದುಬೈ: ಆರಂಭಿಕ ಬ್ಯಾಟರ್‌ ಶಫಾಲಿ ವರ್ಮಾ ಅವರು ಐಸಿಸಿ ಮಹಿಳೆಯರ ಟಿ20 ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ಮಂಗಳವಾರ ಬಿಡುಗಡೆಯಾಗಿರುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉಪನಾಯಕಿ ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಈಚೆಗೆ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಕರ್ಷಕ ಆಟವಾಡಿದ್ದ (176 ರನ್‌) ಶಫಾಲಿ ಅವರು, ನಾಲ್ಕು ಸ್ಥಾನ ಬಡ್ತಿ ಪಡೆದು ಒಂಬತ್ತನೇ ರ‍್ಯಾಂಕ್‌ಗೇರಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರಾಡ್ರಿಗಸ್‌ 14ನೇ ಸ್ಥಾನದಲ್ಲಿದ್ದಾರೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 15ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಒಂದು ಸ್ಥಾನ ಕುಸಿದು ಮೂರನೇ ಶ್ರೇಣಿಯಲ್ಲಿದ್ದಾರೆ. ರಾಧಾ ಯಾದವ್‌ ಮೂರು ಸ್ಥಾನ ಬಡ್ತಿ ಪಡೆದು 15ಕ್ಕೇರಿದ್ದಾರೆ.  ಆರನೇ ಸ್ಥಾನದಲ್ಲಿದ್ದ ರೇಣುಕಾ ಸಿಂಗ್‌ ಠಾಕೂರ್‌ 11ಕ್ಕೆ ಕುಸಿದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸರಣಿ ಗೆಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅರುಂಧತಿ ರೆಡ್ಡಿ ನಾಲ್ಕು ಸ್ಥಾನ ಗಳ ಬಡ್ತಿಯೊಂದಿಗೆ 39ನೇ ಶ್ರೇಣಿಗೇರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.