ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌; ಹಸ್ತಲಾಘವ ಆಟಗಾರರ ವಿವೇಚನೆಗೆ

ರಾಯಿಟರ್ಸ್
Published 17 ಮಾರ್ಚ್ 2020, 19:25 IST
Last Updated 17 ಮಾರ್ಚ್ 2020, 19:25 IST
ಚೆಸ್ ಆಡುವ ಸ್ಥಳದಲ್ಲಿ ಸ್ಯಾನಿಟೈಸರ್‌ಗಳನ್ನು ಇರಿಸಲಾಗಿದೆ.
ಚೆಸ್ ಆಡುವ ಸ್ಥಳದಲ್ಲಿ ಸ್ಯಾನಿಟೈಸರ್‌ಗಳನ್ನು ಇರಿಸಲಾಗಿದೆ.   

ಮಾಸ್ಕೊ: ವಿಶ್ವದ ಎಂಟು ಮಂದಿ ಶ್ರೇಷ್ಠ ಆಟಗಾರರು ರಷ್ಯಾದ ಯಕತಾರಿನ್‌ಬರ್ಗ್‌ನಲ್ಲಿ ಮಂಗಳವಾರ ಆರಂಭವಾದ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಆಟಗಾರರು ‘ಹಸ್ತಲಾಘವ’ ನೀಡುವುದು ಆಯ್ಕೆಗೆ ಬಿಟ್ಟಿದ್ದು ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್‌ ಭೀತಿಯಿಂದಾಗಿ ವಿಶ್ವದ ಬಹುತೇಕ ಕ್ರೀಡೆಗಳು ಸ್ಥಗಿತಗೊಂಡಿರುವ ಹಂತದಲ್ಲೇ, ಹಸ್ತಲಾಘವ ವಿಷಯಕ್ಕೆ ಸಂಬಂಧಿಸಿ ಈ ನಿರ್ಧಾರಕ್ಕೆ ಬರಲಾಗಿದೆ.ಸಾಮಾನ್ಯವಾಗಿ ಆಟಕ್ಕೆ ಮೊದಲು ಮತ್ತು ನಂತರ ಆಟಗಾರರು ಕೈಕುಲುಕುವುದು ಚೆಸ್‌ನಲ್ಲಿ ಸಾಮಾನ್ಯ.

ವಿಶ್ವ ಚಾಂಪಿಯನ್‌, ನಾರ್ವೆಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಸವಾಲಿಗನನ್ನು ಆಯ್ಕೆ ಮಾಡಲು ಈ ಟೂರ್ನಿ ನಡೆಯುತ್ತಿದೆ. ಈ ಟೂರ್ನಿ ಏಪ್ರಿಲ್‌ 3ರವರೆಗೆ ನಡೆಯಲಿದೆ. ಯಕತಾರಿನ್‌ಬರ್ಗ್‌, ರಾಜಧಾನಿ ಮಾಸ್ಕೊದಿಂದ 1,400 ಕಿ.ಮೀ. ಪೂರ್ವದಲ್ಲಿದೆ. ಆಟಗಾರರಿಗೆ ಯಾವುದೇ ಆರೋಗ್ಯ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ADVERTISEMENT

ಚೆಸ್‌ ಬೋರ್ಡ್ ಪಕ್ಕ ಸ್ಯಾನಿಟೈಜರ್‌ಗಳ ಸಣ್ಣ ಶೀಶೆಗಳನ್ನು ಇಡಲಾಗಿದೆ.

ರಷ್ಯದಲ್ಲಿ ಕೊರೊನಾ ಸೋಂಕಿನ 114 ಪ್ರಕರಣಗಳು ವರದಿಯಾಗಿವೆ. ಸೋಂಕು ಹಬ್ಬುವುದನ್ನು ತಡೆಯಲು ಮೇ ತಿಂಗಳವರೆಗೆ ವಿದೇಶಿಯರಿಗೆ ಪ್ರವೇಶ ನಿರಾಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.