ADVERTISEMENT

ಫಿಡೆ ರೇಟೆಡ್‌ ಚೆಸ್‌: ಸಿದ್ಧಾಂತ್‌ ಪೂಂಜಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 0:24 IST
Last Updated 16 ಆಗಸ್ಟ್ 2025, 0:24 IST
   

ಬೆಂಗಳೂರು: ಸಿದ್ಧಾಂತ್‌ ಪೂಂಜ ಅವರು ಬೆಂಗಳೂರು ಗ್ರಾಮೀಣ ಜಿಲ್ಲಾ ಚೆಸ್‌ ಸಂಸ್ಥೆಯು (ಬಿಆರ್‌ಡಿಸಿಎ) ಆಯೋಜಿಸಿದ್ದ ಆಲ್‌ ಇಂಡಿಯಾ ಓಪನ್‌ ಫಿಡೆ ರೇಟೆಡ್‌ ‘ಇಂಡಿಪೆಂಡೆನ್ಸ್‌ ಕಪ್’ ರ‍್ಯಾಪಿಡ್‌ ಚೆಸ್‌ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. 

ಹೊಸಕೋಟೆಯ ಸಣ್ಣತಮ್ಮನಹಳ್ಳಿ  ಶ್ರೀಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಟೂರ್ನಿಯಲ್ಲಿ ಹೆಬ್ಬಾಳ ಕೆಂಪಾಪುರದ ಸಿಂಧಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಿದ್ಧಾಂತ್‌ ಒಟ್ಟು ಒಂಬತ್ತು ಸುತ್ತುಗಳಲ್ಲಿ 8.5 ಅಂಕ ಗಳಿಸಿ ‘ಇಂಡಿಪೆಂಡೆನ್ಸ್‌ ಡೇ ಕಪ್‌’ನೊಂದಿಗೆ ₹30 ಸಾವಿರ ಬಹುಮಾನ ತಮ್ಮದಾಗಿಸಿಕೊಂಡರು. 

ಎರಡನೇ ಸ್ಥಾನ ಗಳಿಸಿದ ಆರ್‌.ಶೈಲೇಶ್‌ ₹25 ಸಾವಿರ, ಮೂರನೇ ಸ್ಥಾನ ಗಳಿಸಿದ ಎಸ್‌.ರೋಹಿತ್‌ ₹ 20 ಸಾವಿರ ಬಹುಮಾನ ಪಡೆದರು. ಫಿಡೆ ರೇಟೆಡ್‌ 252 ಆಟಗಾರರು ಸೇರಿದಂತೆ ಒಟ್ಟು 537 ಮಂದಿ ಟೂರ್ನಿಯಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.