
ಪಿಟಿಐ
ಲಕ್ಷ್ಯ ಸೇನ್
ಜಕಾರ್ತಾ: ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಗುರುವಾರ ತಮ್ಮ ಎದುರಾಳಿಗಳ ವಿರುದ್ಧ ನೇರ ಆಟಗಳ ಗೆಲುವಿನೊಡನೆ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಸೂಪರ್ 500 ಟೂರ್ನಿಯ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ದಾಪುಗಾಲಿಟ್ಟರು.
ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಲಕ್ಷ್ಯ 21–10, 21–11 ರಿಂದ ಹಾಂಗ್‌ಕಾಂಗ್‌ನ ಜೇಸನ್ ಗುನವಾನ್ ಅವರನ್ನು ಪರಾಭವಗೊಳಿಸಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಎರಡನೇ ಸುತ್ತಿನ ಪಂದ್ಯದಲ್ಲಿ 21–19, 21–18 ರಿಂದ ಡೆನ್ಮಾರ್ಕ್‌ನ ಲಿನ್ ಹೊಯ್ಮಾರ್ಕ್ ಜೇರ್‌ಫೆಲ್ಟ್ ಅವರನ್ನು ಸೋಲಿಸಿದರು. .
ಕಿದಂಬಿ ಶ್ರೀಕಾಂತ್ ಅವರ ಸವಾಲು ಅಂತ್ಯಗೊಂಡಿತು. ಅವರು 11–21, 10–21 ರಲ್ಲಿ ತೈವಾನ್‌ನ ಚೌ ಟಿಯೆನ್ ಚೆನ್ ವಿರುದ್ಧ ಸೋತರು. ಮಹಿಳಾ ಸಿಂಗಲ್ಸ್‌ನಲ್ಲಿ ಅನ್ಮೋಲ್ ಖಾರ್ಬ್ ಅವರೂ ಹೊರಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.