ADVERTISEMENT

ಸಿಂಧುಗೆ ಮತ್ತೆ ‘ವರ್ಷದ ಮಹಿಳಾ ಕ್ರೀಡಾಪಟು’ ಗೌರವ

ಪಿಟಿಐ
Published 20 ಫೆಬ್ರುವರಿ 2020, 23:19 IST
Last Updated 20 ಫೆಬ್ರುವರಿ 2020, 23:19 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ.ಸಿಂಧು, ಇಎಸ್‌ಪಿಎನ್‌ನ ‘ವರ್ಷದ ಮಹಿಳಾ ಕ್ರೀಡಾಪಟು’ ಗೌರವವನ್ನು ಸತತ ಮೂರನೇ ವರ್ಷ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಈ ಗೌರವ ಪ್ರತಿಭಾನ್ವಿತ ಶೂಟರ್‌ ಸೌರಭ್‌ ಚೌಧರಿ ಪಾಲಾಗಿದೆ.

ಸೌರಭ್‌ 2019ರ ವಿಶ್ವಕಪ್‌ನಲ್ಲಿ ಒಟ್ಟು ಐದು ಚಿನ್ನದ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದರು. ವೇಗದ ಓಟಗಾರ್ತಿ ದ್ಯುತಿ ಚಾಂದ್‌ ‘ಧೈರ್ಯಶಾಲಿ’ ಪುರ ಸ್ಕಾರಕ್ಕೆ ಪಾತ್ರರಾಗಿದ್ದಾರೆ. ‘ವರ್ಷದ ಪುನರಾಗಮನ’ ಪ್ರಶಸ್ತಿಯನ್ನು ಹಿರಿಯ ಚೆಸ್‌ ಆಟಗಾರ್ತಿ ಕೊನೇರು ಹಂಪಿ ಪಡೆದಿದ್ದಾರೆ. ಅವರು ಕಳೆದ ಡಿಸೆಂಬರ್‌ನಲ್ಲಿ ವಿಶ್ವ ಮಹಿಳಾ ರ‍್ಯಾಪಿಡ್ ಚೆಸ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದ್ದರು. ಮಗುವಿಗೆ ಜನ್ಮ ನೀಡಿದ ನಂತರ ಎರಡು ವರ್ಷ ಅವರು ಆಡಿರಲಿಲ್ಲ.

ಬ್ಯಾಡ್ಮಿಂಟನ್‌ ಚೀಫ್‌ ಕೋಚ್‌ ಪುಲ್ಲೇಲ ಗೋಪಿಚಂದ್‌ ‘ವರ್ಷದ ತರಬೇತುದಾರ’ ಗೌರವಕ್ಕೆ ಭಾಜನ ರಾದರೆ, ಹಾಕಿ ಹಿರಿಯ ಒಲಿಂಪಿಯನ್‌ ಬಲಬೀರ್‌ ಸಿಂಗ್ ಸೀನಿಯರ್‌ ‘ಜೀವಮಾನ ಸಾಧನೆ’ ಪುರಸ್ಕಾರಕ್ಕೆ ಪಾತ್ರರಾದರು. ಅವರು 1948 (ಲಂಡನ್‌), 1952 (ಹೆಲ್ಸಿಂಕಿ) ಮತ್ತು 1956 (ಮೆಲ್ಬರ್ನ್‌) ಒಲಿಂಪಿಕ್ಸ್‌ಗಳಲ್ಲಿ ಆಡಿದ್ದರು. 1971ರ ಮೊದಲ ವಿಶ್ವಕಪ್‌ನಲ್ಲಿ ಆಡಿದ್ದ ತಂಡಕ್ಕೆ
ಕೋಚ್‌ ಆಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.