ADVERTISEMENT

ದಕ್ಷಿಣ ಏಷ್ಯಾ ಕ್ರೀಡಾಕೂಟ: 300 ಪದಕಗಳ ಸನಿಹ ಭಾರತ

159 ಚಿನ್ನ ಗಳಿಸಿ ಮೊದಲ ಸ್ಥಾನದಲ್ಲಿ ಮುಂದುವರಿಕೆ

ಪಿಟಿಐ
Published 9 ಡಿಸೆಂಬರ್ 2019, 20:15 IST
Last Updated 9 ಡಿಸೆಂಬರ್ 2019, 20:15 IST
   

ಕಠ್ಮಂಡು: ಮುಕ್ತಾಯದ ಮುನ್ನಾ ದಿನವಾದ ಸೋಮವಾರ 27 ಚಿನ್ನ ಸೇರಿದಂತೆ 42 ಪದಕಗಳನ್ನು ಗೆದ್ದ ಭಾರತ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ 300 ಪದಕಗಳನ್ನು ಗೆಲ್ಲುವತ್ತ ಹೆಜ್ಜೆ ಹಾಕಿದೆ. ಒಟ್ಟಾರೆ 294 (159 ಚಿನ್ನ, 91 ಬೆಳ್ಳಿ ಮತ್ತು 44 ಕಂಚು) ಪ‍ದಕ ಗಳಿಸಿರುವ ಭಾರತ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು ನೇಪಾಳ (195; 49 ಚಿನ್ನ, 54 ಬೆಳ್ಳಿ, 92 ಕಂಚು) ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ.

ಸೋಮವಾರ ಬಾಕ್ಸಿಂಗ್‌ನಲ್ಲಿ ಭಾರತ ಗರಿಷ್ಠ 6 ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದುಕೊಂಡಿತು. ಅಂಕಿತ್‌ ಖತಾನ (75 ಕೆಜಿ), ವಿನೋದ್ ತನ್ವರ್ (49 ಕೆಜಿ), ಸಚಿನ್ (56 ಕೆಜಿ), ಗೌರವ್ ಚೌಹಾಣ್ (91 ಕೆಜಿ), ಕಲೈವಾಣಿ (48 ಕೆಜಿ), ಪ್ರವೀನ್ (60 ಕೆಜಿ) ಚಿನ್ನ ಗಳಿಸಿದರೆ ಮನೀಷ್ ಕೌಶಿಕ್ (64 ಕೆಜಿ) ಬೆಳ್ಳಿ ಗಳಿಸಿದರು.

ಕುಸ್ತಿಯಲ್ಲಿ ಸೋಮವಾರ ನಡೆದ ಎರಡೂ ಫೈನಲ್‌ಗಳಲ್ಲಿ ಚಿನ್ನ ಭಾರತಕ್ಕೆ ಲಭಿಸಿತು. ಗೌರವ್ ಬಲಿಯಾನ್ ಮತ್ತು ಅನಿತಾ ಶೆರಾನ್ ಕ್ರಮವಾಗಿ ಪುರುಷರ 74 ಕೆಜಿ ಮತ್ತು ಮಹಿಳೆಯರ 68 ಕೆಜಿ ವಿಭಾಗದ ಫೈನಲ್‌ನಲ್ಲಿ ಎದುರಾಳಿಗಳನ್ನು ಸುಲಭವಾಗಿ ಮಣಿಸಿದರು.

ADVERTISEMENT

ಫೆನ್ಸಿಂಗ್‌ನಲ್ಲೂ ಪಾರಮ್ಯ: ಫೆನ್ಸಿಂಗ್‌ನಲ್ಲಿ ಸೋಮವಾರ 3 ವಿಭಾಗಗಳ ಫೈನಲ್ ನಡೆದಿದ್ದು ಎಲ್ಲ ಚಿನ್ನದ ಪದಕಗಳೂ ಭಾರತದ ಪಾಲಾದವು. ಕಬಡ್ಡಿ ಮತ್ತು ಬ್ಯಾಸ್ಕೆಟ್‌ಬಾಲ್‌ನಲ್ಲೂ ಭಾರತ ಪಾರಮ್ಯ ಸಾಧಿಸಿತು. ಶೂಟಿಂಗ್‌ನ ಏರ್ ಪಿಸ್ತೂಲ್ ವಿಭಾಗದ ಚಿನ್ನವೂ ಭಾರತದ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.