ADVERTISEMENT

ಒಲಿಂಪಿಕ್ಸ್ ಪ್ರೇರಣಾ ಗೀತೆ ‘ಚಿಯರ್ ಫಾರ್ ಇಂಡಿಯಾ; ಹಿಂದುಸ್ಥಾನಿ ವೇ’ ಬಿಡುಗಡೆ

ಪಿಟಿಐ
Published 14 ಜುಲೈ 2021, 15:50 IST
Last Updated 14 ಜುಲೈ 2021, 15:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್‌ಗಳನ್ನು ಹುರಿದುಂಬಿಸುವ ಸಲುವಾಗಿ ಪ್ರೇರಣಾ ಗೀತೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಬಿಡುಗಡೆ ಮಾಡಿದರು.

‘ಚಿಯರ್ ಫಾರ್ ಇಂಡಿಯಾ: ಹಿಂದೂಸ್ಥಾನಿ ವೇ’ ಶೀರ್ಷಿಕೆಯ ಈ ಗೀತೆಗೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಹಾಗೂ ಯುವ ಗಾಯಕಿ ಅನನ್ಯಾ ಬಿರ್ಲಾ ಧ್ವನಿಯಾಗಿದ್ದಾರೆ.

‘ದೇಶದ ಎಲ್ಲ ನಾಗರಿಕರು ಈ ಗೀತೆಯನ್ನು ಆಲಿಸಬೇಕು. ಟೋಕಿಯೊಗೆ ತೆರಳುತ್ತಿರುವ ಭಾರತ ತಂಡವನ್ನು ಹುರಿದುಂಬಿಸುವ ಮೂಲಕ ಅವರ ಬೆಂಬಲಕ್ಕೆ ನಿಲ್ಲಬೇಕು‘ ಎಂದು ಸಚಿವ ಅನುರಾಗ್ ಠಾಕೂರ್ ಮನವಿ ಮಾಡಿದ್ದಾರೆ.

ADVERTISEMENT

ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್‌, ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್‌, ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್‌, ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.