ADVERTISEMENT

ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಕಣದಲ್ಲಿ ಪಂಕಜ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 20:00 IST
Last Updated 15 ಫೆಬ್ರುವರಿ 2019, 20:00 IST
ಪಂಕಜ್‌ ಅಡ್ವಾಣಿ
ಪಂಕಜ್‌ ಅಡ್ವಾಣಿ   

ಮುಂಬೈ : ಕರ್ನಾಟಕದ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ಅವರು ವಿರಾಟ್‌ ಕೊಹ್ಲಿ ಫೌಂಡೇಷನ್‌ ಮತ್ತು ಆರ್‌.ಪಿ. ಸಂಜೀವ್‌ ಗೋಯಾಂಕ ಸಮೂಹ ನೀಡುವ ಇಂಡಿಯನ್‌ ಸ್ಪೋರ್ಟ್ಸ್‌ ಹಾನರ್‌ನ ವರ್ಷದ ‘ಶ್ರೇಷ್ಠ ಆಟಗಾರ’ ಪ್ರಶಸ್ತಿಗೆ (ವೈಯಕ್ತಿಕ ವಿಭಾಗ) ನಾಮನಿರ್ದೇಶನಗೊಂಡಿದ್ದಾರೆ.

ಈ ಪುರಸ್ಕಾರಕ್ಕೆ ಜಾವೆಲಿನ್‌ ಪಟು ನೀರಜ್‌ ಚೋ‍ಪ್ರಾ, ಬ್ಯಾಡ್ಮಿಂಟನ್‌ ಆಟಗಾರ ಕಿದಂಬಿ ಶ್ರೀಕಾಂತ್‌, ಕುಸ್ತಿಪಟು ಬಜರಂಗ್‌ ಪೂನಿಯಾ ಮತ್ತು ಶೂಟರ್‌ ಸೌರಭ್‌ ಚೌಧರಿ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ.

ಕ್ರಿಕೆಟಿಗರಾದ ಚೇತೇಶ್ವರ ಪೂಜಾರ, ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ ಮತ್ತು ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರು ತಂಡ ವಿಭಾಗದ ಶ್ರೇಷ್ಠ ಆಟಗಾರ ಪ್ರಶಸ್ತಿಯ ಕಣದಲ್ಲಿದ್ದಾರೆ.

ADVERTISEMENT

ಶ್ರೇಷ್ಠ ಆಟಗಾರ್ತಿ (ತಂಡ ವಿಭಾಗ) ಪುರಸ್ಕಾರಕ್ಕೆ ಕ್ರಿಕೆಟಿಗರಾದ ಮಿಥಾಲಿ ರಾಜ್‌, ಸ್ಮೃತಿ ಮಂದಾನ, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಹಾಕಿ ತಂಡದ ಗೋಲ್‌ಕೀಪರ್‌ ಸವಿತಾ ಪೂನಿಯಾ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಶ್ರೇಷ್ಠ ಆಟಗಾರ್ತಿ (ವೈಯಕ್ತಿಕ ವಿಭಾಗ) ಪ್ರಶಸ್ತಿಗಾಗಿ ಬಾಕ್ಸರ್‌ ಮೇರಿ ಕೋಮ್‌, ಕುಸ್ತಿಪಟು ವಿನೇಶಾ ಪೋಗಟ್‌, ಸ್ಪ್ರಿಂಟರ್‌ ಹಿಮಾ ದಾಸ್‌, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮತ್ತು ಹೆಪ್ಟಾಥ್ಲೀಟ್‌ ಸ್ವ‍ಪ್ನಾ ಬರ್ಮನ್‌ ಅವರ ನಡುವೆ ಪೈಪೋಟಿ ಇದೆ.

ಶನಿವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.