ಬೇಗ (ಆಸ್ಟ್ರೇಲಿಯಾ): ಭಾರತದ ಉದಯೋನ್ಮುಖ ಆಟಗಾರ್ತಿ ಅನಾಹತ್ ಸಿಂಗ್ ಅವರು ಎನ್‌ಎಸ್‌ಡಬ್ಲ್ಯು ಬೇಗ ಓಪನ್ ಸ್ಕ್ವಾಷ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಶನಿವಾರ ಫೈನಲ್ ತಲುಪಿದರು.
17 ವರ್ಷ ವಯಸ್ಸಿನ ಈ ಆಟಗಾರ್ತಿ, ತೀವ್ರ ಹೋರಾಟ ಕಂಡ ಸೆಮಿಫೈನಲ್ ಪಂದ್ಯದಲ್ಲಿ 3–2ರಿಂದ (10–12, 11–5, 11–5, 10–12, 11–7) ಈಜಿಪ್ಟ್‌ನ ನೂರ್ ಖಫಾಜಿ ಎದುರು ಗೆಲುವು ಸಾಧಿಸಿದರು.
ಅಗ್ರ ಶ್ರೇಯಾಂಕಿತೆಯಾಗಿರುವ ಅನಾಹತ್ ಫೈನಲ್ ಪಂದ್ಯದಲ್ಲಿ ಹಬೀಬಾ ಹನಿ (ಈಜಿಪ್ಟ್) ಅವರ ಸವಾಲನ್ನು ಎದುರಿಸಬೇಕಿದೆ.
ಎರಡನೇ ಶ್ರೇಯಾಂಕದ ಹಬೀಬಾ ಅವರು ಅಂತಿಮ ನಾಲ್ಕರ ಸುತ್ತಿನ ಪಂದ್ಯದಲ್ಲಿ 3–1ರಿಂದ (11–9, 7–11, 12–10, 11–6) ಭಾರತದ ಆಕಾಂಕ್ಷಾ ಸಾಳುಂಕೆ ಅವರನ್ನು ಮಣಿಸಿ, ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.
ಟೂರ್ನಿಯು ಒಟ್ಟಾರೆ ₹22 ಲಕ್ಷ ಬಹುಮಾನ ಮೊತ್ತ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.