ADVERTISEMENT

ಕಾಮನ್‌ವೆಲ್ತ್ ಗೇಮ್ಸ್ 2022: ಫೈನಲ್‌ಗೆ ಶ್ರೀಹರಿ ನಟರಾಜ್

ಈಜು: ಸಜನ್‌ ಪ್ರಕಾಶ್‌ಗೆ 9ನೇ ಸ್ಥಾನ

ಪಿಟಿಐ
Published 1 ಆಗಸ್ಟ್ 2022, 11:20 IST
Last Updated 1 ಆಗಸ್ಟ್ 2022, 11:20 IST
200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಸ್ಪರ್ಧಿಸಿದ ಸಜನ್‌ ಪ್ರಕಾಶ್ –ಪಿಟಿಐ ಚಿತ್ರ
200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಸ್ಪರ್ಧಿಸಿದ ಸಜನ್‌ ಪ್ರಕಾಶ್ –ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್‌: ಭಾರತದ ಶ್ರೀಹರಿ ನಟರಾಜ್ ಅವರು ಪುರುಷರ ಈಜು ಸ್ಪರ್ಧೆಯ 50 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು, ಪದಕದ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಈಜುಪಟು 25.38 ಸೆ.ಗಳಲ್ಲಿ ಗುರಿತಲುಪಿದರು. ಒಟ್ಟಾರೆಯಾಗಿ ಎಂಟನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದುಕೊಂಡರು. ಇದಕ್ಕೂ ಮುನ್ನ ಹೀಟ್ಸ್‌ನಲ್ಲಿ ಅವರು 25.52 ಸೆ.ಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದ್ದರು.

21 ವರ್ಷದ ಶ್ರೀಹರಿ ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಏಳನೇ ಸ್ಥಾನ ಪಡೆದಿದ್ದರು.

ADVERTISEMENT

ಭಾರತದ ಇನ್ನೊಬ್ಬ ಈಜುಪಟು ಸಜನ್‌ ಪ್ರಕಾಶ್‌ ಅವರು ಪುರುಷರ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ 9ನೇ ಸ್ಥಾನ ಪಡೆದುಕೊಂಡರು.

ಹೀಟ್ಸ್‌ನಲ್ಲಿ 1 ನಿ. 58.99 ಸೆ.ಗಳಲ್ಲಿ ಗುರಿ ತಲುಪಿದ ಅವರು ಫೈನಲ್‌ಗೆ ‘ರಿಸರ್ವ್‌’ ಸ್ಪರ್ಧಿಯಾಗಿದ್ದರು. ಫೈನಲ್‌ ಪ್ರವೇಶಿಸಿದ್ದ ಎಂಟು ಈಜುಪಟುಗಳಲ್ಲಿ ಒಬ್ಬರು ಹಿಂದೆ ಸರಿದರೆ ಸಜನ್‌ಗೆ ಅವಕಾಶ ಲಭಿಸುತ್ತಿತ್ತು. ಆದರೆ ಭಾರತದ ಸ್ಪರ್ಧಿಗೆ ಫೈನಲ್‌ನಲ್ಲಿ ಅವಕಾಶ ಸಿಗಲಿಲ್ಲ. ಒಂಬತ್ತನೇ ಸ್ಥಾನ ಗಳಿಸಿದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.