ADVERTISEMENT

ಸ್ವಿಸ್ ಓಪನ್ ಬ್ಯಾಡ್ಮಿಂಟನ್: ಶ್ರೀಕಾಂತ್ ಗೆಲುವಿನ ಆರಂಭ

ಚಿರಾಗ್‌ ಶೆಟ್ಟಿ–ಸಾತ್ವಿಕ್ ಸಾಯಿರಾಜ್ ಜೋಡಿಗೆ ಜಯ; ಅಶ್ವಿನಿ ಪೊನ್ನಪ್ಪಗೆ ಸೋಲು

ಪಿಟಿಐ
Published 23 ಮಾರ್ಚ್ 2022, 15:53 IST
Last Updated 23 ಮಾರ್ಚ್ 2022, 15:53 IST
ಕಿದಂಬಿ ಶ್ರೀಕಾಂತ್ -ಪಿಟಿಐ ಚಿತ್ರ
ಕಿದಂಬಿ ಶ್ರೀಕಾಂತ್ -ಪಿಟಿಐ ಚಿತ್ರ   

ಬಾಸೆಲ್: ಎದುರಾಳಿಯನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಕಿದಂಬಿ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿಏಳನೇ ಶ್ರೇಯಾಂಕದ ಶ್ರೀಕಾಂತ್21-16, 21-17ರಲ್ಲಿ ಡೆನ್ಮಾರ್ಕ್‌ನ ಮ್ಯಾಡ್ಸ್ ಕ್ರಿಸ್ಟೊಫರ್‌ಸೆನ್ ಅವರನ್ನು ಮಣಿಸಿದರು. 32 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತ್ತು.

ಪುರುಷರ ಡಬಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಜೋಡಿ ಇಂಡೊನೇಷ್ಯಾದ ಮೊಹಮ್ಮದ್ ಶೊಹಿಬುಲ್ ಫಿಕ್ರಿ ಮತ್ತು ಬಗಾಸ್ ಮೌಲಾನ ಅವರನ್ನು 17-21, 21-11, 21-18ರಲ್ಲಿ ಮಣಿಸಿದರು.

ADVERTISEMENT

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸುಮಿತ್ ರೆಡ್ಡಿ ಎರಡನೇ ಸುತ್ತಿನಲ್ಲಿ ಸೋಲುಂಡರು. ಫ್ರಾನ್ಸ್‌ನ ಥಾಮ್‌ ಗಿಕ್ವೆಲ್‌–ಡೆಲ್ಫಿನ್ ಡೆಲ್ರು ಜೋಡಿ ಅಶ್ವಿನಿ–ಸುಮಿತ್ ಅವರನ್ನು 21–13, 21–9ರಲ್ಲಿ ಸೋಲಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ತ್ರೀಶಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಕೂಡ ನಿರಾಸೆ ಅನುಭವಿಸಿದರು. ಅವರು ಥಾಯ್ಲೆಂಡ್‌ನ ಜೊಲ್ಕೊಲ್ಫನ್ ಕಿಟಿತರಕುಲ್ ಮತ್ತು ರವಿಂದ ಪ್ರಜೊಂಗ್‌ಜಾಯ್ ಎದುರು 21–10, 21–17ರಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.