
ಗೋಕಾಕನಲ್ಲಿ ಸೋಮವಾರ ದೇಹದಾರ್ಢ್ಯ ರಾಜ್ಯಮಟ್ಟದ ಸ್ವರ್ಧೆಯಲ್ಲಿ ವಿಜೇತರಾದ ವರುಣಕುಮಾರ್, ಸ್ವರೂಪ ಬಂಗೇರಾ, ಮಂಜುನಾಥ ಐಯ್ಯರ್ ಮತ್ತು ಕುಮಾರ ಕೆ ಅವರಿಗೆ ಸ್ಪರ್ಧೆಯ ಆಯೋಜಕರು ಬಹುಮಾನ ವಿತರಿಸಿದರು.
ಗೋಕಾಕ (ಬೆಳಗಾವಿ ಜಿಲ್ಲೆ): ದಾವಣಗೆರೆಯ ಮಂಜುನಾಥ್ ಅಯ್ಯರ್ ಅವರು 12ನೇ ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾರ್ಢ್ಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ₹2 ಲಕ್ಷ ನಗದು ಮತ್ತು ಟ್ರೋಫಿಯನ್ನು ಗೆದ್ದುಕೊಂಡರು.
ಮಹರ್ಷಿ ಶ್ರೀವಾಲ್ಮೀಕಿ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ಪರ್ಧೆಯಲ್ಲಿ ಬೆಂಗಳೂರಿನ ಕುಮಾರ ಕೆ. ಅವರು ಮೊದಲನೇ ರನ್ನರ್ ಅಪ್ ಆಗಿ ₹1 ಲಕ್ಷ ನಗದು ಮತ್ತು ಟ್ರೋಫಿ ಪಡೆದರು.
ಉಡುಪಿಯ ಸ್ವರೂಪ ಬಂಗೇರಾ ಅವರು ಎರಡನೇ ರನ್ನರ ಅಪ್ ಆಗಿ ₹50 ಸಾವಿರ ನಗದು, ಟ್ರೋಫಿ ಹಾಗೂ ಬೆಸ್ಟ್ ಪೋಸರ್ ಆಗಿ ದಾವಣಗೆರೆಯ ವರುಣಕುಮಾರ್ ಆಯ್ಕೆಯಾಗಿ ₹10 ಸಾವಿರ ನಗದು ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.