ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವು ಡಿ.ಎನ್. ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕಿಯರ ವಿಭಾಗದ ಪಂದ್ಯದಲ್ಲಿ 50–40 ಅಂತರದಿಂದ ವಿವೇಕ್ಸ್ ಎಸ್.ಸಿ ವಿರುದ್ಧ ಗೆಲುವು ಸಾಧಿಸಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಶನಿವಾರ ನಡೆದ ರೌಂಡ್ ರಾಬಿನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ವಿರಾಮದ ವೇಳೆ 7 (21–28) ಅಂಕಗಳ ಹಿನ್ನಡೆಯಲ್ಲಿದ್ದ ವ್ಯಾನ್ಗಾರ್ಡ್ಸ್ ತಂಡವು ನಂತರದಲ್ಲಿ ಅಮೋಘ ಆಟ ಪ್ರದರ್ಶಿಸಿತು. ವ್ಯಾನ್ಗಾರ್ಡ್ಸ್ ತಂಡದ ತಿಶಾ 16, ನೈಧಿಲೆ 14 ಅಂಕ ಗಳಿಸಿದರು. ವಿವೇಕ್ಸ್ ತಂಡದ ದೇವಿಪ್ರಿಯಾ ಮತ್ತು ಆರೋಹಿ ಕ್ರಮವಾಗಿ 17 ಮತ್ತು 12 ಪಾಯಿಂಟ್ಸ್ ಕಲೆ ಹಾಕಿದರು.
ಫಲಿತಾಂಶ: ರೌಂಡ್ ರಾಬಿನ್ ಸೂಪರ್ ಲೀಗ್: ಬಾಲಕಿಯರು: ಮೌಂಟ್ಸ್ ಕ್ಲಬ್ 72–68ರಿಂದ ಮಂಡ್ಯ ಜಿಲ್ಲೆ ವಿರುದ್ಧ; ಬೆಂಗಳೂರು ವ್ಯಾನ್ಗಾರ್ಡ್ಸ್ 50–40ರಿಂದ ವಿವೇಕ್ಸ್ ಎಸ್.ಸಿ ವಿರುದ್ಧ ಗೆಲುವು ಸಾಧಿಸಿತು.
ಬಾಲಕರು: ಎಚ್‌ಬಿಆರ್ ಬಿ.ಸಿ 75–60ರಿಂದ ಮೈಸೂರು ಜಿಲ್ಲೆ ಎ ಎದುರು; ಚಿಕ್ಕಮಗಳೂರು ಜಿಲ್ಲೆ 92–74ರಿಂದ ಎಂಎನ್‌ಕೆ ರಾವ್ ಪಾರ್ಕ್ ಎದುರು; ಡಿವೈಇಎಸ್ ಬೆಂಗಳೂರು 63–31ರಿಂದ ಹೂಪ್ಸ್ 7 ಬಿ.ಸಿ ಎದುರು ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.