ADVERTISEMENT

ರಾಜ್ಯ ರ‍್ಯಾಂಕಿಂಗ್ ಟಿಟಿ: ಅಭಿನವ್, ದೇಶ್ನಾಗೆ ಪ್ರಶಸ್ತಿ

ಬೆಳಗಾವಿಯಲ್ಲಿ ರಾಜ್ಯ ರ‍್ಯಾಂಕಿಂಗ್ ಟಿಟಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 16:35 IST
Last Updated 29 ಆಗಸ್ಟ್ 2024, 16:35 IST
ಅಭಿವನ್ ಕೆ. ಮೂರ್ತಿ ಮತ್ತು ದೇಶ್ನಾ ಎಂ ವಂಶಿಕಾ 
ಅಭಿವನ್ ಕೆ. ಮೂರ್ತಿ ಮತ್ತು ದೇಶ್ನಾ ಎಂ ವಂಶಿಕಾ    

ಬೆಳಗಾವಿ: ಅಭಿನವ್ ಕೆ ಮೂರ್ತಿ ಮತ್ತು ದೇಶ್ನಾ ಎಂ ವಂಶಿಕಾ ಅವರು ಬೆಳಗಾವಿ ಕ್ಲಬ್‌ನಲ್ಲಿ ನಡೆಯುತ್ತಿರುವ  ಐದನೇ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 19 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಜಯಿಸಿದರು. 

ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ (ಬಿಡಿಟಿಟಿಎ) ಆಶ್ರಯದಲ್ಲಿ  ಆಯೋಜನೆಯಾಗಿರುವ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಭಿನವ್ 7-11, 11-9, 11-9, 11-5, 11 - 8ರಿಂದ ವಿ.ಜಿ. ವಿಭಾಸ್ ವಿರುದ್ಧ ಜಯಿಸಿದರು. 

ಸೆಮಿಫೈನಲ್‌ನಲ್ಲಿ ಅಭಿನವ್  11 - 8 , 11 - 4 , 11 - 9ರಿಂದ ಆರ್ಯಾ ಜೈನ್ ವಿರುದ್ಧ ಜಯಿಸಿದರು. ಎರಡನೇ ಸೆಮಿಫೈನಲ್‌ನಲ್ಲಿ  ವಿಭಾಸ್ 11 - 9 , 15 - 13 , 11 - 13 , 13 - 15 , 11 - 8ರಿಂದ ಬಿ.ಆರ್. ಗೌರವ್ ವಿರುದ್ಧ ಗೆದ್ದರು.

ADVERTISEMENT

ಬಾಲಕಿಯರ ಫೈನಲ್‌ನಲ್ಲಿ ದೇಶ್ನಾ 11-9, 11-9, 11-2, 11-3ರಿಂದ ಹಿಮಾಂಶಿ ಚೌಧರಿ ವಿರುದ್ಧ ಜಯಿಸಿದರು. ಸೆಮಿಫೈನಲ್‌ಗಳಲ್ಲಿ ದೇಶ್ನಾ 11-9, 11-6, 8-11, 11-2ರಿಂದ ತೃಪ್ತಿ ಪುರೋಹಿತ್ ವಿರುದ್ಧ; ಹಿಮಾಂಶಿ 12-14, 11-7, 12-10, 11-7ರಿಂದ ನೀತಿ ಅಗರವಾಲ್ ಎದುರು ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.