ADVERTISEMENT

ರಾಜ್ಯ ಸೀನಿಯರ್ ಅಥ್ಲೆಟಿಕ್ಸ್: ದಕ್ಷಿಣ ಕನ್ನಡದ ಮುತ್ತಪ್ಪ ನೂತನ ದಾಖಲೆ

ಮನೋಜ್, ಸ್ನೇಹಾ ವೇಗಿಗಳು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 22:54 IST
Last Updated 22 ಜೂನ್ 2025, 22:54 IST
   

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುತ್ತಪ್ಪ ಭಾನುವಾರ ನಡೆದ ಕರ್ನಾಟಕ ರಾಜ್ಯ ಸೀನಿಯರ್ ಅಥ್ಲೆಟಿಕ್‌ ಕೂಟದ ಪುರುಷರ ವಿಭಾಗದ ಹ್ಯಾಮರ್‌ ಥ್ರೋನಲ್ಲಿ ನೂತನ ದಾಖಲೆ ಬರೆದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಮುತ್ತಪ್ಪ ಅವರು 59.30 ಮೀಟರ್ಸ್ ದೂರ ಹ್ಯಾಮರ್ ಥ್ರೋ ಮಾಡಿದರು. ಇದರೊಂದಿಗೆ ಸಚಿನ್ ಅವರ ಹೆಸರಿನಲ್ಲಿದ್ದ ಹಳೆಯ ದಾಖಲೆ (58.69ಮೀ) ಮೀರಿದರು.

ವೇಗದ ರಾಜ–ರಾಣಿ: ಬೆಂಗಳೂರಿನ ಆರ್ಯನ್ ಮನೋಜ್ ಮತ್ತು ಚಿಕ್ಕಮಗಳೂರಿನ ಎಸ್‌.ಎಸ್‌. ಸ್ನೇಹಾ ಅವರು ಈ ಕೂಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ 100 ಮೀಟರ್ಸ್ ಓಟದ ವಿಭಾಗದಲ್ಲಿ ವೇಗದ ‘ರಾಜ’ ಮತ್ತು ‘ರಾಣಿ’ಯಾಗಿ ಹೊರಹೊಮ್ಮಿದರು.

ADVERTISEMENT

ಫಲಿತಾಂಶ: ಪುರುಷರು: 100 ಮೀ ಓಟ: ಆರ್ಯನ್ ಮನೋಜ್ (ಬೆಂಗಳೂರು; 10.34ಸೆ)–1, ಗಗನ್ ಎಲ್ ಗೋಯೆಡಾ (ಬೆಂಗಳೂರು)–2, ಆರ್. ಪ್ರಜ್ವಲ್ (ಮೈಸೂರು)–3. 400 ಮೀ ಓಟ: ಬಾಲಕೃಷ್ಣ (ಹಾಸನ; 47.36ಸೆ)–1, ಸಿ.ಎಚ್‌. ರಿಹಾನ್ (ಬೆಂಗಳೂರು)–2, ಡಿ. ಸ್ಯಾಮುಯೆಲ್ (ಬೆಂಗಳೂರು)–3.

800 ಮೀ ಓಟ: ತುಷಾರ್ ಭೆಕೆ (ಬೆಳಗಾವಿ; 1ನಿ,50.6ಸೆ)–1, ಕಮಲ ಕಣ್ಣನ್ ಎಸ್ (ಬೆಂಗಳೂರು ನಗರ)–2, ವಿನಾಯಕ (ಬೆಳಗಾವಿ)–3.

1500 ಮೀ: ವೈಭವ್ ಮಾರುತಿ ಪಾಟೀಲ (ಬೆಳಗಾವಿ; 3ನಿ,52.9ಸೆ)–1, ಸಂಗಮೇಶ್ ಕುರಿ (ಬೆಂಗಳೂರು)–2, ಆರೋಹಿತ (ಬೆಂಗಳೂರು)–3.

5000 ಮೀ: ಓಂಕಾರ್ ರಾಜೇಂದ್ರ ಪಿ (ಬೆಂಗಳೂರು: 14ನಿ, 18.72ಸೆ)–1, ಶಿವಾಜಿ ಮಾದಪ್ಪಗೌಡ (ಉತ್ತರ
ಕನ್ನಡ)–2, ಎ.ಆರ್. ರೋಹಿತ್ (ಬೆಂಗಳೂರು)–3.

110 ಮೀ ಹರ್ಡಲ್ಸ್: ಪಿ. ಯಶಸ್‌ (ತುಮಕೂರು; 14.27ಸೆ)–1, ಆದೇಶ್ ಜಿ ಹೆಗಡೆ (ಬೆಂಗಳೂರು)–2, ಲಬೈಕ್ ನಲಬಂದ್ (ಬೆಳಗಾವಿ)–3

400 ಮೀ ಹರ್ಡಲ್ಸ್: ಪಿ. ಯಶಸ್ (ತುಮಕೂರು; 51.3ಸೆ)–1, ರಕ್ಷಿತ್ ಆರ್ ಅರವಿಂದ (ಉತ್ತರಕನ್ನಡ)–2, ರಕ್ಷಿತ್ (ಉಡುಪಿ; 53.4ಸೆ)–3

ಲಾಂಗ್‌ಜಂಪ್: ಟಿ.ಆರ್. ಅನುಷ್ (ಉಡುಪಿ; ದೂರ: 7.49ಮೀ)–1, ಎಸ್. ಆರ್ಯ (ಬೆಂಗಳೂರು)–2, ಬಿ. ನವೀನ್ (ತುಮಕೂರು)–3

ಹೈಜಂಪ್ : ಸುದೀಪ್(ಶಿವಮೊಗ್ಗ; ಎತ್ತರ; 2.05ಮೀ)–1, ಎಸ್. ಹರ್ಷಿತ್ (ಬೆಂಗಳೂರು)–2, ಸಿನಾನ್ (ಉಡುಪಿ)–3.

ಟ್ರಿಪಲ್ ಜಂಪ್: ಜೆಸ್ಸಿ ಸಂದೇಶ್ (ಬೆಂಗಳೂರು; 15.38ಮೀ)–1, ಆರ್. ಅಬ್ದುಲ್‌ ಮುನಾಫ್
(ಬೆಂಗಳೂರು)–2, ಗಣೇಶ್ ಕುಮಾರ್ (ಮೈಸೂರು)–3

ಪೋಲ್‌ವಾಲ್ಟ್‌: ಸುಭಾಷ್ ಚಂದವನ (ಬೆಂಗಳೂರು; 4.60 ಮೀ) –1, ಸಿದ್ಧರಾಮ (ಬೆಂಗಳೂರು)–2.

ಶಾಟ್‌ಪಟ್‌: ಅಜಯ್ ಅಶೋಕ್ (ಬೆಳಗಾವಿ; ದೂರ: 16.88ಮೀ)–1, ಪ್ರಜ್ವಲ್ ಎಂ ಶೆಟ್ಟಿ (ಉಡುಪಿ)–2, ಇ. ಮೋಹನ್ (ಮೈಸೂರು)–3.

ಜಾವೆಲಿನ್ ಥ್ರೋ: ಶಶಾಂಕ್ ಪಾಟೀಲ (ಬೆಳಗಾವಿ; 76.36ಮೀ)–1, ಶಾರೂಕ್ (ಕೆಎಸ್‌ಪಿ)–2, ಬಿ. ಕಲ್ಲೋಳಪ್ಪ (ಬೆಳಗಾವಿ)–3.

ಹ್ಯಾಮರ್‌ ಥ್ರೋ: ಮುತ್ತಪ್ಪ (ಹೊಸ ದಾಖಲೆ: 59.30 ಮೀ. ಹಳೆಯದು: 58.69ಮೀ–ಸಚಿನ್)–1, ಸಚಿನ್ (ಕೊಪ್ಪಳ)–2, ಧೀರಜ್ (ಉಡುಪಿ)–3

ಮಹಿಳೆಯರು: 100 ಮೀ ಓಟ: ಎಸ್‌.ಎಸ್‌. ಸ್ನೇಹಾ (ಚಿಕ್ಕಮಗಳೂರು; 11.52ಸೆ)–1, ಎ.ಟಿ. ದಾನೇಶ್ವರಿ (ಬೆಳಗಾವಿ)–2, ಪ್ರಕೃತಿ (ಚಿತ್ರದುರ್ಗ)–3

400 ಮೀ: ವಿಜಯಕುಮಾರಿ (ಬೆಂಗಳೂರು; 53.3ಸೆ)–1, ಪೂವಮ್ಮ (ದಕ್ಷಿಣ ಕನ್ನಡ)–2, ಸಿಂಚಲ್ ಕಾವೇರಮ್ಮ (ಕೊಡಗು)–3

800 ಮೀ: ಪಿ.ಬಿ. ರೇಖಾ (ದಕ್ಷಿಣ ಕನ್ನಡ; 2ನಿ,14.4ಸೆ)–1, ಜಿ. ಮನುಶ್ರೀ (ಬೆಂಗಳೂರು)–2, ಪ್ರತೀಕ್ಷಾ (ಉಡುಪಿ)–3

1500ಮೀ: ಡಿ.ಆರ್. ಸ್ಮಿತಾ (ಹಾಸನ; 4ನಿ,33.1ಸೆ)–1, ಸಿ. ಪ್ರಿಯಾಂಕಾ (ಬೆಂಗಳೂರು)–2, ಸಿ.ಎಂ. ರಾಶಿ (ಕೊಡಗು)–3

5000ಮೀ: ತೇಜಸ್ವಿ (ಕೆಎಸ್‌ಪಿ; 18ನಿ,11.89ಸೆ)–1, ಆರಾಧಾನ (ಬೆಂಗಳೂರು)–2, ಎಂ.ಎನ್. ಸೀಮಾ (ಬೆಳಗಾವಿ)–3

100ಮೀ ಹರ್ಡಲ್ಸ್: ಶ್ರೇಯಾ ರಾಜೇಶ್ (ಬೆಂಗಳೂರು; 14.39ಸೆ)–1, ಬಿ.ಎಸ್‌. ಕೀರ್ತಿ (ಧಾರವಾಡ)–2,

400 ಮೀ ಹರ್ಡಲ್ಸ್: ದೀಕ್ಷಿತಾ ಎಸ್ ಗೌಡ (ಉತ್ತರಕನ್ನಡ; 1ನಿ,00.4ಸೆ)–1, ಕೆ. ಪ್ರಜ್ಞಾ (ಉಡುಪಿ)–2, ಮೇಘಾ ಮುನವಳ್ಳಿ (ಧಾರವಾಡ)–3

ಲಾಂಗ್‌ಜಂಪ್: ಸಿ. ವರ್ಷಿತಾ (ಮಂಡ್ಯ; 5.91ಮೀ)–1, ಶ್ರೀದೇವಿಕಾ (ಉಡುಪಿ)–2, ಅಕ್ಷತಾ (ಉಡುಪಿ)–3

ಹೈಜಂಪ್: ಪಲ್ಲವಿ ಪಾಟೀಲ (ಯಾದಗಿರಿ; 1.80ಮೀ)–1, ಎಸ್‌.ಬಿ. ಸುಪ್ರಿಯಾ (ಚಿಕ್ಕಮಗಳೂರು)–2.

ಟ್ರಿಪಲ್ ಜಂಪ್: ಸಿ. ವರ್ಷಿತಾ (ಮಂಡ್ಯ; 12.60ಮೀ)–1, ಐಶ್ವರ್ಯ (ಬೆಳಗಾವಿ)–2.

ಪೋಲ್‌ವಾಲ್ಟ್‌: ಸಿಂಧುಶ್ರೀ (ಬೆಂಗಳೂರು; 3.70ಮೀ)–1, ಎ. ನಿಶಾ ಬಾನು (ರೈಲ್ವೆಸ್)–2.

ಡಿಸ್ಕಸ್‌ ಥ್ರೋ: ಬಿ. ಸುಷ್ಮಾ (ದಕ್ಷಿಣ ಕನ್ನಡ; 41.08ಮೀ)–1, ಮಾಧುರ್ಯ (ಉಡುಪಿ)–2, ಪ್ರಗ್ಯಾ ಗೋಯಲ್ (ಬೆಂಗಳೂರು)–3.

ಶಾಟ್‌ಪಟ್‌: ವಿ. ಅಂಬಿಕಾ (ಮೈಸೂರು; 14.20ಮೀ)–1, ಟಿ. ನಿವೇತಾ (ಕರ್ನಾಟಕ ಎಫ್‌ಡಿ)–2, ಬೃಂದಾ ಎಸ್. ಗೌಡ (ಮೈಸೂರು)–3

ಹ್ಯಾಮರ್‌ ಥ್ರೋ: ಸ್ಪ್ರುಹಾ ರಾಜು ನಾಯ್ಕ (ಬೆಳಗಾವಿ; 46.10 ಮೀ)–1, ಅಮ್ರೀನ್ (ದಕ್ಷಿಣ ಕನ್ನಡ)–2, ಖುಷಿ ಸಾಲಿಯಾನ (ದಕ್ಷಿಣ ಕನ್ನಡ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.