ADVERTISEMENT

ಬ್ಯಾಸ್ಕೆಟ್‌ಬಾಲ್‌: ಸೆಮಿಫೈನಲ್‌ಗೆ ಬೀಗಲ್ಸ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 19:35 IST
Last Updated 20 ಅಕ್ಟೋಬರ್ 2018, 19:35 IST

ಬೆಂಗಳೂರು: ಧ್ರುವ ಅವರ ಉತ್ತಮ ಆಟದ ಬಲದಿಂದ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ ರಾಜ್ಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಬೀಗಲ್ಸ್‌ 42–13 ಪಾಯಿಂಟ್ಸ್‌ನಿಂದ ಯಂಗ್‌ ಬುಲ್ಸ್‌ ತಂಡವನ್ನು ಮಣಿಸಿತು.

ವಿಜಯಿ ತಂಡದ ಧ್ರುವ 13 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. 27–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ಬೀಗಲ್ಸ್‌ ತಂಡ ನಂತರವೂ ಪ್ರಾಬಲ್ಯ ಮೆರೆಯಿತು.

ADVERTISEMENT

ಇತರ ಪಂದ್ಯಗಳಲ್ಲಿ ವಿಮಾನಪುರ ಎಸ್‌.ಸಿ 47–16ರಲ್ಲಿ ವಿವೇಕ್‌ ಎಸ್‌.ಸಿ ಎದುರೂ, ಬಿ.ಸಿ.ಬಿ.ಸಿ 58–43ರಲ್ಲಿ ಅಪ್ಪಯ್ಯ ಕ್ಲಬ್‌ ಎದುರೂ, ಜೆಎಸ್‌ಸಿ 53–23ರಲ್ಲಿ ವಿಬಿಸಿ ಮಂಡ್ಯ ವಿರುದ್ಧವೂ ಗೆದ್ದವು.

ಬಾಲಕಿಯರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಯಂಗ್‌ ಓರಿಯನ್ಸ್‌ 49–42 ಪಾಯಿಂಟ್ಸ್‌ನಿಂದ ಬೀಗಲ್ಸ್‌ ಬಿ.ಸಿ ವಿರುದ್ಧ ಗೆದ್ದಿತು.

ಓರಿಯನ್ಸ್‌ ತಂಡದ ಆರ್ಷಿ 24 ಪಾಯಿಂಟ್ಸ್‌ ಗಳಿಸಿದರು. ಬೀಗಲ್ಸ್‌ ತಂಡದ ವೈಭವಿ 17 ಪಾಯಿಂಟ್ಸ್‌ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಜೆಎಸ್‌ಸಿ 34–13ರಲ್ಲಿ ಬಿ.ಸಿ.ಬಿ.ಸಿ ಎದುರೂ, ಭಾರತ್‌ ಎಸ್‌ಯು 38–20ರಲ್ಲಿ ಡಿವೈಇಎಸ್‌ ಮಂಡ್ಯ ಮೇಲೂ, ಮೌಂಟ್ಸ್‌ ಕ್ಲಬ್‌ 22–9ರಲ್ಲಿ ಹಲಸೂರು ಬಿ.ಸಿ ವಿರುದ್ಧವೂ ವಿಜಯಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.