ಬೆಂಗಳೂರು: ಅಮೋಘ ಆಟವಾಡಿದ ಮಂಗಳೂರಿನ ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವ ಅವರು ನಗರದಲ್ಲಿ ಭಾನುವಾರ ಮುಕ್ತಾಯಗೊಂಡ ಫಿಡೆ ರೇಟೆಡ್ ರಾಜ್ಯ ಮಹಿಳಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅವರು 9 ಸುತ್ತುಗಳಿಂದ 8 ಪಾಯಿಂಟ್ಸ್ ಸಂಗ್ರಹಿಸಿದರು.
ಮಲ್ಲೇಶ್ವರದ ಎಂಎಲ್‌ಎ ಕಾಲೇಜಿನಲ್ಲಿ ನಡೆದ ಮೂರು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ನಗರದ ಸಿದ್ಧಿ ರಾವ್ (7.5 ಅಂಕ) ಮತ್ತು ಆದ್ಯಾ ಗೌಡ (7) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಉತ್ತರ ಕನ್ನಡದ ಅಕ್ಷಯಾ ಎಸ್. ಮತ್ತು ಬೆಂಗಳೂರಿನ ಕೃಪಾ ಎಸ್.ಉಕ್ಕಲಿ (ತಲಾ 7) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳನ್ನು ಗಳಿಸಿದರು.
ಅಗ್ರಸ್ಥಾನ ಪಡೆದ ಆರುಷಿ ಟ್ರೋಫಿ ಮತ್ತು 8,000 ಬಹುಮಾನ ಪಡೆದರು. ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ ಆಟಗಾರ್ತಿಯರು ಕ್ರಮವಾಗಿ ₹7,000, 6000 ಮತ್ತು 5,000 ನಗದು ಬಹುಮಾನ ತಮ್ಮದಾಗಿಸಿಕೊಂಡರು.
ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ವತಿಯಿಂದ ನಡೆದ ಈ ಟೂರ್ನಿಯನ್ನು ಬೆಂಗಳೂರು ನಗರ ಜಿಲ್ಲಾ ಚೆಸ್ ಸಂಸ್ಥೆ ಆಯೋಜಿಸಿತ್ತು. ದಾಖಲೆಯ 178 ಮಂದಿ ಕಣದಲ್ಲಿದ್ದು, ಮೊದಲ ಬಾರಿ ಚಾಂಪಿಯನ್‌ಷಿಪ್ ಫಿಡೆ ರೇಟೆಡ್ ಆಗಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.