ADVERTISEMENT

ನೆಟ್ಟಕಲ್ಲಪ್ಪ ಈಜು ಕೇಂದ್ರದ ಹಿತಶ್ರೀಗೆ ಮತ್ತೊಂದು ಚಿನ್ನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 19:25 IST
Last Updated 26 ನವೆಂಬರ್ 2025, 19:25 IST
ವಿಶಾಖನ್‌ ಶರವಣನ್‌
ವಿಶಾಖನ್‌ ಶರವಣನ್‌   

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್‌ಎಸಿ) ಈಜುಪಟುಗಳು ಬಸವನಗುಡಿ ಈಜು ಕೇಂದ್ರದಲ್ಲಿ (ಬಿಸಿಎ) ನಡೆಯುತ್ತಿರುವ ರಾಜ್ಯ ಶಾರ್ಟ್‌ ಕೋರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ದಿನವೂ ಆಕರ್ಷಕ ಪ್ರದರ್ಶನ ಮುಂದುವರಿಸಿದರು. ಹಿತಶ್ರೀ  ಎನ್‌. ಅವರು 17 ವರ್ಷದೊಳಗಿನ ಬಾಲಕಿಯರ 400 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಹಾಗೂ ಆರ್ಯನ್‌ ಎ. ಪಾಟೀಲ್‌ 17 ವರ್ಷದೊಳಗಿನ ಬಾಲಕರ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

15 ವರ್ಷ ವಯಸ್ಸಿನ ಹಿತಶ್ರೀ ಅವರು 17 ವರ್ಷದೊಳಗಿನ ಬಾಲಕಿಯರ 400 ಮೀ. ಮೆಡ್ಲೆಯಲ್ಲಿ 5ನಿ. 32.65 ಸೆಕೆಂಡುಗಳಲ್ಲಿ ಗುರಿತಲುಪಿದರು. ಡಿಕೆವಿ ಅಕ್ವಾಟಿಕ್‌ ಸೆಂಟರ್‌ನ ಪ್ರತೀಕ್ಷಾ ಎನ್‌. ಗೌಡ (5ನಿ. 36.10ಸೆ.) ಹಾಗೂ ಬಿಸಿಎನ ಆಸ್ರಾ ಸುಧೀರ್‌ (5ನಿ. 41.24ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. ಬಾಲಕರ ವಿಭಾಗದ ಈ ಸ್ಪರ್ಧೆಯಲ್ಲಿ ಮೂರೂ ಪ್ರಶಸ್ತಿ ಬಿಸಿಎ ಈಜುಪಟುಗಳ ಪಾಲಾದವು. ಸೂರ್ಯ ಜೆ.ಟಿ. (4ನಿ.40.67ಸೆ.) ಸ್ವರ್ಣಗೆದ್ದರೆ, ರಾಘವ್‌ ಎಸ್‌. (4ನಿ.44.16ಸೆ.) ಹಾಗೂ ಯಶ್‌ ಕಾರ್ತಿಕ್‌ (4ನಿ.51.41ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಆರ್ಯನ್‌ ಅವರು 26.16ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿದರು. ಅನೀಶ್‌ ಎ. ಕೋರೆ (26.39ಸೆ.) ರಜತ ಪದಕಕ್ಕೆ ಹಾಗೂ ಅನ್ವಿತ್‌ ಆರ್‌.ಬಿ. ಕಂಚಿಗೆ ಕೊರಳೊಡ್ಡಿದರು.

ADVERTISEMENT

ಬಿಸಿಎನ ವಿಶಾಖನ್‌ ಶರವಣನ್‌ ಅವರು 17 ವರ್ಷದೊಳಗಿನ ಬಾಲಕರ 50 ಮೀ. ಹಾಗೂ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದು ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.