ADVERTISEMENT

ಈಜು: ಕರ್ನಾಟಕ ತಂಡದ ಕೂಟ ದಾಖಲೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:28 IST
Last Updated 9 ಆಗಸ್ಟ್ 2024, 16:28 IST
ಕೂಟ ದಾಖಲೆ ನಿರ್ಮಿಸಿದ ಕರ್ನಾಟಕದ (ಎಡದಿಂದ) ಸಮರ್ಥ್‌ ಗೌಡ, ಶರಣ್‌ ಎಸ್‌., ಅಕ್ಷಜ್‌ ಠಾಕೂರಿಯಾ ಮತ್ತು ರಿಷಿತ್‌ ರಂಗನ್‌
ಕೂಟ ದಾಖಲೆ ನಿರ್ಮಿಸಿದ ಕರ್ನಾಟಕದ (ಎಡದಿಂದ) ಸಮರ್ಥ್‌ ಗೌಡ, ಶರಣ್‌ ಎಸ್‌., ಅಕ್ಷಜ್‌ ಠಾಕೂರಿಯಾ ಮತ್ತು ರಿಷಿತ್‌ ರಂಗನ್‌    

ಬೆಂಗಳೂರು: ಕರ್ನಾಟಕದ ರಿಷಿತ್‌ ರಂಗನ್‌, ಸಮರ್ಥ್‌ ಗೌಡ ಬಿ.ಎಸ್‌., ಶರಣ್‌ ಎಸ್‌., ಅಕ್ಷಜ್‌ ಠಾಕುರಿಯಾ ಅವರನ್ನೊಳಗೊಂಡ ತಂಡ ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 40ನೇ ಸಬ್ ಜೂನಿಯರ್ ಮತ್ತು 50ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ರಿಲೇ ಸ್ಪರ್ಧೆಯಲ್ಲಿ ಕೂಟ ದಾಖಲೆ ನಿರ್ಮಿಸಿದೆ.

ಬಾಲಕರ ಗುಂಪು–2ರ 4x100 ಮೀ.ಪ್ರೀಸ್ಟೈಲ್‌ ರಿಲೆ ಸ್ಪರ್ಧೆಯಲ್ಲಿ 3 ನಿಮಿಷ 45.86 ಸೆಕೆಂಡುಗಳಲ್ಲಿ ಗುರಿ ತಲುಪಿ‌ದ ಕರ್ನಾಟಕ ತಂಡ  ಹೊಸ ದಾಖಲೆ ಬರೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿತು.

ಕರ್ನಾಟಕದ ಸ್ಪರ್ಧಿಗಳ ಫಲಿತಾಂಶಗಳು:

ADVERTISEMENT

ಬಾಲಕರ ಗುಂಪು–1: 200 ಮೀ ಬಟರ್‌ ಫ್ಲೈ: ದರ್ಶನ್‌ ಎಸ್‌.(2ನಿ 05.89ಸೆ)–1, ನಿರಂಜನ್‌ ಕಾರ್ತಿಕ್‌ ಭೀಮರಾಜ್‌ (2ನಿ 09.06ಸೆ)–3. 50 ಮೀ.ಫ್ರೀಸ್ಟೈಲ್‌: ಚಿಂತನ್‌ ಎಸ್‌.ಶೆಟ್ಟಿ (23.91ಸೆ)–1. ಗುಂಪು–2: 200 ಮೀ.ಬಟರ್‌ಫ್ಲೈ: ಅಕ್ಷಜ್‌ ಠಾಕೂರಿಯಾ (2ನಿ 12.31ಸೆ)–1, 50 ಮೀ.ಫ್ರೀಸ್ಟೈಲ್‌: ವೇದಾಂತ್‌ ರಾಕೇಶ್‌ ಮೆಹ್ರಾ (25.88ಸೆ)–2. 1500 ಮೀ. ಫ್ರೀಸ್ಟೈಲ್‌: ಶರಣ್‌ ಎಸ್‌. (16ನಿ 48.40ಸೆ)–1, ಅಕ್ಷಜ್‌ ಪಿರಿಗಿ (17ನಿ 25.00ಸೆ)–3. ಗುಂಪು–3: 100 ಮೀ.ಬಟರ್‌ಫ್ಲೈ: ಅಮಿತ್‌ ಎಚ್‌. ಪವನ್‌ (1ನಿ.10.29ಸೆ)–1.

ಗುಂಪು–1: ಬಾಲಕಿಯರ 400 ಮೀ. ಫ್ರೀಸ್ಟೈಲ್‌: ಶಿರಿನ್‌ (4ನಿ.29.07ಸೆ)–1, ಶ್ರೀ ಚರಣಿ ತುಮು (4ನಿ 35.62ಸೆ)–2. 200 ಮೀ. ಫ್ರೀಸ್ಟೈಲ್‌: ಹಷಿಕಾ ರಾಮಚಂದ್ರ (2ನಿ.23.68ಸೆ)–1, ಸುಹಾಸಿನಿ ಘೋಷ್‌ (2ನಿ 24.45ಸೆ)–2. ಗುಂಪು–2: 400 ಮೀ. ಫ್ರೀಸ್ಟೈಲ್‌: ಧೀನಿಧಿ ದೇಸಿಂಗು (4ನಿ.32.76ಸೆ)–1, ನೈಶಾ (4ನಿ 34.31ಸೆ)–3. ಗುಂಪು–3: 100 ಮೀ.ಬಟರ್‌ಫ್ಲೈ: ಶ್ವಿತಿ ದಿವಾಕರ್‌ ಸುವರ್ಣ (1ನಿ.12.05ಸೆ)–1. 50 ಮೀ ಫ್ರೀಸ್ಟೈಲ್‌: ಶ್ವಿತಿ ದಿವಾಕರ್‌ ಸುವರ್ಣ (31.08ಸೆ)–2, ಶ್ರೇಯಾ ಸುರೇಶ್‌ ಪೂಜಾರ್‌ (31.28ಸೆ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.