ಬೆಂಗಳೂರು: ಕರ್ನಾಟಕ ತಂಡ ಭುವನೇಶ್ವರದಲ್ಲಿ ಮುಕ್ತಾಯಗೊಂಡ 40ನೇ ಸಬ್ ಜೂನಿಯರ್ ಮತ್ತು 50ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಷ್ಟ್ರವನ್ನು ಹಿಂದೆಹಾಕಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಕರ್ನಾಟಕದ ಸ್ಪರ್ಧಿಗಳು ಈ ಕೂಟದಲ್ಲಿ 44 ಚಿನ್ನ, 21 ಬೆಳ್ಳಿ ಮತ್ತು 25 ಕಂಚು ಸೇರಿ ಒಟ್ಟು 90 ಪದಕಗಳನ್ನು ಬಾಚಿಕೊಂಡರು.
ಕರ್ನಾಟಕದ ಸ್ಪರ್ಧಿಗಳ ಫಲಿತಾಂಶಗಳು: ಬಾಲಕರ ಗುಂಪು–1: 200 ಮೀ ಫ್ರೀಸ್ಟೈಲ್: ದಕ್ಷಣ್ ಎಸ್. (1ನಿ 55.22ಸೆ)-1. 200 ಮೀ. ಮೆಡ್ಲೆ: ಆರ್. ನವನೀತ್ ಗೌಡ (2ನಿ 12.66ಸೆ)–3. ಗುಂಪು–2: 200 ಮೀ.ಫ್ರೀಸ್ಟೈಲ್: ಅಕ್ಷಜ್ ಠಾಕೂರಿಯಾ (1ನಿ 59.95ಸೆ)–1, ರಿಷಿತ್ ರಂಗನ್ (2ನಿ 1.63ಸೆ)–2. 200 ಮೀ. ಬ್ಯಾಕ್‌ಸ್ಟ್ರೋಕ್: ಸಮರ್ಥ್ ಗೌಡ ಬಿ.ಎಸ್. (2ನಿ 14.98ಸೆ)–2.
ಬಾಲಕಿಯರು: ಗುಂಪು–1: 200 ಮೀ.ಫ್ರೀಸ್ಟೈಲ್: ಹಷಿಕಾ ರಾಮಚಂದ್ರ (2ನಿ 07.77ಸೆ)–1, ಶಿರಿನ್ (2ನಿ 07.96ಸೆ)–2. 50 ಮೀ ಬಟರ್‌ಫ್ಲೈ: ಮಾನವಿ ವರ್ಮಾ (28.65ಸೆ)–1, ಋಜುಲಾ ಎಸ್.(28.93ಸೆ)–3. 200 ಮೀ.ಬ್ಯಾಕ್‌ಸ್ಟ್ರೋಕ್: ಮೀನಾಕ್ಷಿ ಮೆನನ್ (2ನಿ 28.11ಸೆ)–3. ಗುಂಪು–2: 200 ಮೀ.ಫ್ರೀಸ್ಟೈಲ್: ಧೀನಿಧಿ ದೇಸಿಂಗು (2ನಿ 07.25ಸೆ)–1, ತ್ರಿಶಾ ಸಿಂಧು ಎಸ್. (2ನಿ 16.20ಸೆ)–3. 200 ಮೀ. ಬ್ಯಾಕ್‌ಸ್ಟ್ರೋಕ್: ನೈಶಾ (2ನಿ 25.85ಸೆ)–1. 50 ಮೀ ಬಟರ್‌ಫ್ಲೈ: ಚರಿತಾ ಫಣೀಂದ್ರನಾಥ್ (29.38ಸೆ)–2. ಗುಂಪು–3: 50 ಮೀ.ಬ್ಯಾಕ್‌ಸ್ಟ್ರೋಕ್: ಶ್ವಿತಿ ದಿವಾಕರ್ ಸುವರ್ಣ (36.83ಸೆ)–2. 50 ಮೀ ಬಟರ್‌ಫ್ಲೈ: ಶ್ವಿತಿ ದಿವಾಕರ್ ಸುವರ್ಣ (32.98ಸೆ)–1, ಆರೋಹಿ ಚಿತ್ರಗಾರ (33.69ಸೆ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.