ADVERTISEMENT

ಟಿ.ಟಿ: ಯಶಸ್ವಿನಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:27 IST
Last Updated 4 ಜುಲೈ 2019, 19:27 IST
ಯಶಸ್ವಿನಿ ಘೋರ್ಪಡೆ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ
ಯಶಸ್ವಿನಿ ಘೋರ್ಪಡೆ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ   

ಹುಬ್ಬಳ್ಳಿ: ಬೆಂಗಳೂರಿನ ಸ್ಕೈಸ್‌ ಕ್ಲಬ್‌ನಯಶಸ್ವಿನಿ ಘೋರ್ಪಡೆ, ಧಾರವಾಡದಲ್ಲಿ ಗುರುವಾರ ಆರಂಭವಾದ ಕಾಸ್ಮಸ್‌ ಕಪ್‌ ರಾಜ್ಯಮಟ್ಟದ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.

ಕಾಸ್ಮಸ್‌ ಕ್ಲಬ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಯಶಸ್ವಿನಿ 11-7, 12-14, 11-6, 11-8, 8-11, 8-11, 13-11ರಲ್ಲಿ ಕೆನರಾ ಬ್ಯಾಂಕ್‌ನ ಮರಿಯಾ ರೋನಿ ಎದುರು ಗೆಲುವು ಸಾಧಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಮರಿಯಾ 11-8, 11-8, 10-12, 11-4, 11-4ರಲ್ಲಿ ಸ್ಕೈಸ್‌ ಕ್ಲಬ್‌ನ ಬಿ.ಟಿ. ಸಂಯುಕ್ತಾ ಮೇಲೂ, ಯಶಸ್ವಿನಿ 11-6, 11-5, 11-8, 11-8ರಲ್ಲಿ ಸ್ಕೈಸ್‌ ಕ್ಲಬ್‌ನ ಸುಷ್ಮಿತಾ ಆರ್‌. ಬಿದ್ರಿ ವಿರುದ್ಧವೂ ಗೆಲುವು ಪಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.