ಬೆಳಗಾವಿ: ಸಹನಾ ಮೂರ್ತಿ ಹಾಗೂ ಅಭಿನವ್ ಮೂರ್ತಿ ಅವರು ಮಂಗಳವಾರ ಇಲ್ಲಿ ಮುಕ್ತಾಯಗೊಂಡ ವಿನಯಾ ಕೋಟ್ಯಾನ್ ಸ್ಮರಣಾರ್ಥ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರು. ಆರ್ಣವ್ ಎನ್. ಅವರು 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅಭಿನವ್ ಮೂರ್ತಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.
ಟಿಳಕವಾಡಿ ಕ್ಲಬ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ಅಭಿನವ್ 6–11, 4–11, 11–6, 11–4, 11–4, 12–10ರಿಂದ ವರುಣ್ ಕಶ್ಯಪ್ ಅವರನ್ನು ಮಣಿಸಿದರು. ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಂತು ಚಾಂಪಿಯನ್ ಆದರು.
ಸೆಮಿಫೈನಲ್ ಪಂದ್ಯಗಳಲ್ಲಿ ವರುಣ್ 11–8, 11–5, 11–4, 11–3ರಿಂದ ಯಶ್ವಂತ್ ಪಿ. ವಿರುದ್ಧ ಜಯಗಳಿಸಿದರೆ, ಅಭಿನವ್ 11–7, 3–11, 11–8, 11–6, 11–8ರಿಂದ ಆರ್ಣವ್ ಅವರನ್ನು ಪರಾಭವಗೊಳಿಸಿದ್ದರು.
ಸಹನಾ ಮೂರ್ತಿ ಅವರು ತೀವ್ರ ಪೈಪೋಟಿ ಕಂಡ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ 11–8, 9–11, 10–12, 11–5, 5–11, 11–3, 11–7ರಿಂದ ತನಿಷ್ಕಾ ಕಪಿಲ್ ಕಾಲಭೈರವ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ನಾಲ್ಕರ ಹಂತದ ಪಂದ್ಯಗಳಲ್ಲಿ ಸಹನಾ 12–10, 15–17, 5–11, 12–10, 11–7, 7–11, 11–7ರಿಂದ ತೃಪ್ತಿ ಪುರೋಹಿತ್ ಎದುರು ಹಾಗೂ ತನಿಷ್ಕಾ 11–4, 11–7, 11–6, 7–11, 4–11, 6–11, 11–8ರಿಂದ ಕರುವಾನ ಜಿ. ಎದುರು ಜಯ ಸಾಧಿಸಿದ್ದರು.
ಆರ್ಣವ್‌ಗೆ ಪ್ರಶಸ್ತಿ: 19 ವರ್ಷದೊಳಗಿನ ಬಾಲಕರ ಪ್ರಶಸ್ತಿ ಸುತ್ತಿನಲ್ಲಿ ಆರ್ಣವ್ 11–6, 7–11, 11–9, 7–11, 11–9, 11–5ರಿಂದ ಅಭಿನವ್ ಅವರನ್ನು ಸೋಲಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಅಭಿನವ್ 11–7, 11–8, 4–11, 8–11, 11–6ರಿಂದ ಬಿ.ಆರ್. ಗೌರವ್ ವಿರುದ್ಧ ಹಾಗೂ ಆರ್ಣವ್ 11–9, 6–11, 4–11, 11–9, 11–9ರಿಂದ ವರುಣ್ ಕಶ್ಯಪ್ ಎದುರು ಜಯ ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.